ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಹೊಸವರ್ಷಾಚರಣೆ, ಪಾರ್ಟಿಗಳಿಗೆ ಡಿ.31ರಂದು ನಿಷೇಧ ಹೇರಬೇಕು ಎಂದು ಹಿಂದು ಜನಜಾಗೃತಿ ವೇದಿಕೆ ಬಂಟ್ವಾಳ ತಹಸೀಲ್ದಾರ್ ಗೆ ಮನವಿ ಮಾಡಿದೆ. ಈ ಕುರಿತು ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮನವಿಯನ್ನು ವೇದಿಕೆ ಸಲ್ಲಿಸಿದೆ.
ದೇಶದಾದ್ಯಂತ ಹೆಚ್ಚುತ್ತಿರುವ ಪಾಶ್ಚಾತ್ಯ ಕೆಟ್ಟ ರೂಢಿಗಳ ಅಂಧಾನುಕರಣೆಯಿಂದಾಗಿ ಹೊಸ ವರ್ಷದ ಹೆಸರಿನಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ಧೂಮಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ, ಪಾರ್ಟಿಗಳ ಆಯೋಜನೆ ಮಾಡುವುದು ಹೆಚ್ಚಾಗಿರುತ್ತದೆ, ಈ ರಾತ್ರಿ ಮದ್ಯಪಾನ ಮಾಡಿ ಅತಿವೇಗದಿಂದ ವಾಹನಗಳನ್ನು ಓಡಿಸುವುದು ಹೆಚ್ಚಾಗಿದ್ದು, ಇವರಲ್ಲಿ ಸಣ್ಣವಯಸ್ಸಿನ ಯುವಕರು, ಯುವತಿಯರು ಮತ್ತು ಮಹಿಳೆಯರು ಸಹ ಇರುತ್ತಾರೆ. ಇದಲ್ಲದೇ ಇಂತಹ ಸಮಯದಲ್ಲಿ ಅನೇಕ ಮಹಿಳೆಯರ ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ಘಟನೆಗಳು ನಡೆಯುತ್ತಿದೆ. ಈಗ ಕೊರೋನಾ ಮಹಾಮಾರಿಯು 3ನೇ ಅಲೆ ಬರುವ ಸಾಧ್ಯತೆ ಇದೆ. ಹೀಗಿರುವಾಗ ಡಿಸೆಂಬರ್ 31 ರಂದು ಆಚರಿಸಲಾಗುವ ಪಾರ್ಟಿಯಿಂದ ಕೊರೋನಾದ ಸೊಂಕು ಹೆಚ್ಚು ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೀಡು ಮಾಡುವುದು ಯೋಗ್ಯವಲ್ಲ. ಆದ್ದರಿಂದ ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆಯನ್ನು ಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದೆ. ಚೇತನ ವಿಟ್ಲ, ಪಾಲಕ್ಷ ಸಜೀಪ, ನಾಗೇಶ ಬಂಟ್ವಾಳ, ಯಾದೇಶ ಬೆಂಜನ ಪದವು, ಜಯಕುಮಾರ್ ಮಂಜಲ್ಪಾದೆ, ರಾಧಾಕೃಷ್ಣ ಪೆಲಟ್ಟಕಟ್ಟೆ, ಅಜಿತ್, ಕಿರಣ್, ಸಂಕೇಶ, ಸುರೇಶ ಬಿಸಿರೋಡ್ ಉಪಸ್ಥಿತರಿದ್ದರು.
Be the first to comment on "ಹೊಸವರ್ಷಾಚರಣೆ, ಪಾರ್ಟಿಗಳಿಗೆ ನಿಷೇಧ: ತಹಸೀಲ್ದಾರ್ ಗೆ ಹಿಂದು ಜನಜಾಗೃತಿ ಸಮಿತಿ ಮನವಿ"