ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು, ಬಿ.ಸಿ.ರೋಡು ಹಾಗೂ ಹತ್ತು ಸಮಸ್ತರಿಂದ
ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು, ಬಿ.ಸಿ.ರೋಡು ಹಾಗೂ ಹತ್ತು ಸಮಸ್ತರು ಪ್ರಸ್ತುತ ಪಡಿಸುವ 9 ನೇ ವರ್ಷದ ಪ್ರಯುಕ್ತ ಡಿಸೆಂಬರ್ 18 ನೇ ಶನಿವಾರದಂದು ರಾತ್ರಿ 9.30 ರಿಂದ ಅಲೆತ್ತೂರು ಶ್ರೀ ಪಂಜುರ್ಲಿ ದೈವದ ಅಮೆಜುಕು ಬಾಕಿಮಾರು ಗದ್ದೆಯಲ್ಲಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿರುವರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾದ ಚರಣ್ ಎಂಬ ವಿದ್ಯಾರ್ಥಿಗೆ ಸನ್ಮಾನಿಸಲಾಗುವುದು, ಪದವಿ ಪೂರ್ವ ಕಾಲೇಜಿನಲ್ಲಿ ಅತ್ಯಧಿಕ ಅಂಕ ಪಡೆದ ಎರಡು ಕಣ್ಣುಗಳನ್ನು ಕಳೆದು ಕೊಂಡ ಪರ್ಲಿಯ ನಿವಾಸಿ ದಿನೇಶ್ ಎಂಬವರಿಗೆ ಸಹಾಯ ಧನ ನೀಡಿ ಪ್ರೋತ್ಸಾಹಿಸಲಾಗುವುದು. ಊರ ಭಕ್ತಾಭಿಮಾನಿಗಳಿಂದ ತಾನು ಮನ ಧನಗಳ ಸಹಕಾರದೊಂದಿಗೆ ಹೊರೆ ಕಾಣಿಕೆಯನ್ನು ಸ್ವೀಕರಿಸಲಾಗುವುದು ಎಂದು ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು ಇವರ ಪ್ರಕಟಣೆ ತಿಳಿಸಿದೆ.
Be the first to comment on "ನಾಳೆ ಅಲೆತ್ತೂರಿನಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ"