ಬಂಟ್ವಾಳನ್ಯೂಸ್ ವರದಿ, www.bantwalnews.com REPORT ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳನ್ಯೂಸ್ ವರದಿ: ಮಂಚಿಯ ಲಯನ್ಸ್ ಸೇವಾ ಮಂದಿರ ಬಳಿ ಸಾರ್ವಜನಿಕರಿಗೆ ಫಿಸಿಯೋಥೆರಪಿ ಕೇಂದ್ರದ ಉದ್ಘಾಟನೆ ಡಿ.18ರಂದು ನಡೆಯಲಿದ್ದು, 19ರಂದು ಮುಡಿಪುವಿನ ಹೋಟೆಲ್ ಸೂರ್ಯದ ಬಯಲು ರಂಗ ಮಂದಿರದಲ್ಲಿ ಪ್ರಾಂತ್ಯ 1ರ ಪ್ರಾಂತೀಯ ಲಯನ್ಸ್ ಸಮ್ಮೇಳನ ನಡೆಯಲಿದೆ. ಎರಡೂ ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಲಯನ್ಸ್ ಜಿಲ್ಲೆ 317 ಡಿಯ ಪ್ರಾಂತ್ಯ 1ರ ಪ್ರಾಂತೀಯ ಅಧ್ಯಕ್ಷ ಮನೋರಂಜನ್ ಕೆ.ಆರ್. ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ನೀಡಿದರು.
ಪ್ರಾಂತೀಯ ಸಮ್ಮಿಲನ ಹಾಗೂ 5 ಲಕ್ಷ ರೂ ವೆಚ್ಚದ ಶಾಶ್ವತ ಯೋಜನೆಯ ಅನುಷ್ಠಾನ ಕಾರ್ಯಕ್ರಮ ಇದಾಗಿದ್ದು,. 18ರಂದು ಶನಿವಾರ ಬೆಳಗ್ಗೆ 9.30ಕ್ಕೆ ಮಂಗಳೂರು ತೇಜಸ್ವಿನಿ ಆಸ್ಪತ್ರೆ ಸಂಸ್ಥಾಪಕ ಡಾ. ಎಂ.ಶಾಂತಾರಾಮ ಶೆಟ್ಟಿ ಅವರು ಫಿಸಿಯೋಥೆರಪಿ ಕೇಂದ್ರವನ್ನು ಉದ್ಘಾಟಿಸುವರು. ಇಲ್ಲಿ 100 ರೂ ರಿಜಿಸ್ಟ್ರೇಶನ್ ಮಾಡಿಸಿಕೊಂಡರೆ, ವರ್ಷಪೂರ್ತಿ ಫಿಸಿಯೋಥೆರಪಿಯನ್ನು ಉಚಿತವಾಗಿ ನಡೆಸಿಕೊಡಲಾಗುತ್ತದೆ. ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ದೀಪ ಪ್ರಜ್ವಲಿಸಲಿದ್ದಾರೆ. ಅತಿಥಿಗಳಾಗಿ ತೇಜಸ್ವಿನಿ ಫಿಸಿಯೋಥೆರಪಿ ಕಾಲೇಜು ಪ್ರಿನ್ಸಿಪಾಲ್ ಡಾ. ಸುಭಾಶ್ಚಂದ್ರ ರೈ, ಉಪಗವರ್ನರ್ ಗಳಾದ ಸಂಜಿತ್ ಶೆಟ್ಟಿ ಮತ್ತು ಡಾ. ಮೆಲ್ವಿನ್ ಡಿಸೋಜ ಪಾಲ್ಗೊಳ್ಳಲಿದ್ದಾರೆ ಎಂದರು.
19ರಂದು ಭಾನುವಾರ ಸಂಜೆ 4.30ರಿಂ ಮುಡಿಪಿನ ಹೋಟೆಲ್ ಸೂರ್ಯ ಬಯಲು ರಂಗಮಂದಿರದಲ್ಲಿ ಪ್ರಾಂತ್ಯ 1ರ ಪ್ರಾಂತಿಯ ಸಮ್ಮೇಳನ ಮನಸಾಕ್ಷಿ ಎಂಬ ಹೆಸರಿನಲ್ಲಿ ನಡೆಯಲಿದೆ. ಪ್ರಾಂತ್ಯ ಅಧ್ಯಕ್ಷ ಮನೋರಂಜನ್ ಕೆ.ಆರ್. ಅಧ್ಯಕ್ಷತೆ ವಹಿಸಲಿದ್ದು, ಪ್ರಾಂತೀಯ ಪ್ರಥಮ ಮಹಿಳೆ ರಾಜಲಕ್ಷ್ಮೀ ಮನೋಹರ್ ಉದ್ಘಾಟಿಸುವರು. ಬೆಂಗಳೂರಿನ ಸುಮನಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸುನೀತಾ ಮಂಜುನಾಥ್ ಪ್ರಧಾನ ಅತಿಥಿಗಳಾಗಿರುವರು ಎಂದರು.
ಕಾರ್ಯಕ್ರಮದ ಯಶಸ್ವಿಗೆ 14 ಕ್ರಿಯಾಶೀಲ ಸಮಿತಿಗಳನ್ನು ಮಾಡಲಾಗಿದೆ. ಮುಖ್ಯ ಸಲಹೆಗಾರರಾಗಿ ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಗೀತಪ್ರಕಾಶ್, ಮಾಜಿ ಜಿಲ್ಲಾ ಗವರ್ನರ್ ಕೆ. ದೇವದಾಸ ಭಂಡಾರಿ, ಪ್ರಧಾನ ಸಮಿತಿ ಅಧ್ಯಕ್ಷರಾಗಿ ಡಾ. ಗೋಪಾಲ ಆಚಾರ್, ಕಾರ್ಯದರ್ಶಿಯಾಗಿ ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿಯಾಗಿ ಜಯಪ್ರಕಾಶ್ ರೈ ಮೇರಾವು, ಶಾಶ್ವತ ಯೋಜನೆ ಸಂಚಾಲಕರಾಗಿ ವಿಠಲ ಕುಮಾರ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಾಂತ್ಯ ವಿಭಾಗದಲ್ಲಿ ವಲಯಾಧ್ಯಕ್ಷರಾಗಿ ಎಂ.ಕೃಷ್ಣಶ್ಯಾಮ್, ಗಂಗಾಧರ ರೈ ಪಿಒ, ಪ್ರಾಂತೀಯ ಸಲಹೆಗಾರರಾಗಿ ಜಯಂತ ಶೆಟ್ಟಿ, ಗ್ಯಾಟ್ ಸಂಯೋಜಕರಾಗಿ ಶಿವಾನಂದ ಬಾಳಿಗ, ವಲಯ ಸಲಹೆಗಾರರಾಗಿ ವಿನ್ನಿ ಮಸ್ಕರೇಂಜಸ್, ಆಥಿಥೇಯ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಕಾರ್ಯದರ್ಶಿ ಸಂತೋಷ್ ಡಿಸೋಜ, ಕೋಶಾಧಿಕಾರಿ ರವೀಂದ್ರ ಕುಕ್ಕಾಜೆ ಸಹಾಯದೊಂದಿಗೆ ಪ್ರಾಂತ್ಯ 1 ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷ ಡಾ. ಗೋಪಾಲ ಆಚಾರ್, ಶಾಶ್ವತ ಯೋಜನೆ ಸಂಚಾಲಕ ವಿಠಲಕುಮಾರ್ ಶೆಟ್ಟಿ, ಪ್ರಮುಖರಾದ ಜಗದೀಶ ಯಡಪಡಿತ್ತಾಯ, ರಮಾನಂದ ನೂಜಿಪ್ಪಾಡಿ, ಜಯಪ್ರಕಾಶ್ ರೈ ಮೇರಾವು, ಉಮಾನಾಥ ರೈ ಮೇರಾವು, ಶ್ರೀನಿವಾಸ ಪೂಜಾರಿ ಮೇಲ್ಕಾರ್, ಸಂಜೀವ ಶೆಟ್ಟಿ, ಜಯಂತ್ ಶೆಟ್ಟಿ, ರವೀಂದ್ರ ಕುಕ್ಕಾಜೆ ಮತ್ತಿತರರು ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment on "ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ 18ರಂದು ಫಿಸಿಯೋಥೆರಪಿ ಕೇಂದ್ರ ಉದ್ಘಾಟನೆ, ಮುಡಿಪಿನಲ್ಲಿ 19ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನ"