



ಬಂಟ್ವಾಳ: ಮಕ್ಕಳ ದಿನಾಚರಣೆಯನ್ನುವೀರಕಂಭದ ಮಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನವಾಗಿ ನಡೆಸಲಾಯಿತು. ಪೇಪರ್ ಬ್ಯಾಗ್ ತಯಾರಿ, ಕ್ಲೇ ಮಾಡೆಲ್, ಡ್ರಾಯಿಂಗ್ ಸಹಿತ ವಿವಿಧ ರಚನಾತ್ಮಕ ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಳ್ಳಿ ಶಾಲಾ ಮಕ್ಕಳು ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಶನ್ಫತ್ ಶರೀಫ್ ಉದ್ಘಾಟಿಸಿದರು. ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಈಶ್ವರ ಭಟ್ ನಗ್ರಿಮೂಲೆ ಭಾಗವಹಿಸಿದ್ದರು. ಶಾಲಾ ಮಕ್ಕಳಿಗೆ ಕ್ಲೇ ಮೋಡೆಲ್ , ಡ್ರಾಯಿಂಗ್ , ಪಿಕ್ ಆಂಡ್ ಆಕ್ಟ್ , ಕ್ವಿಝ್ , ವಿವಿವಿಧ ರೀತಿಯ ಲಕ್ಕಿ ಗೇಮ್ಸ್ ಗಳನ್ನು ನಡೆಸಲಾಯಿತು. ಶಾಲಾ ಶಿಕ್ಷಕರಿಗೆ ಮತ್ತು ಪೋಷಕರಿಗೆ ಅದೃಷ್ಟ ದ ಆಟ ನಡೆಸಲಾಗಿದ್ದು, ಬಹುಮಾನ ವಿತರಿಸಲಾಯಿತು. ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಅಧ್ಯಕ್ಷ ತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಆನ್ಸ್ ನ ಅಧ್ಯಕ್ಷೆ ವಿದ್ಯಾ ಉಮೇಶ್, ಕಾರ್ಯದರ್ಶಿ ರಶ್ಮಿ ವಿ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವಿಜಯಾ ಶೇಖರ್, ಸದಸ್ಯ ಗೋಪಾಲಕೃಷ್ಣ ಭಟ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಪ್ರಮುಖರಾದ ಜಯರಾಜ್ ಎಸ್ ಬಂಗೇರ ,ಸುಕುಮಾರ್ ಬಂಟ್ವಾಳ, ಕಿಶೋರ್ ಕುಮಾರ್, ಗಾಯತ್ರಿ ಲೋಕೇಶ್, ನಾರಾಯಣ ಸಿ ಪೆರ್ನೆ ನೌಶೀದ್ ಆಲ್ ಖಜಾನಾ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ಮುರ್ಷೀದಾ ಬಾನು ಹಾಗೂ ಜಯಲಕ್ಷ್ಮಿ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.



Be the first to comment on "ಮಜಿ ಶಾಲೆಯಲ್ಲಿ ಸೃಜನಶೀಲ ಚಟುವಟಿಕೆಯೊಂದಿಗೆ ಮಕ್ಕಳ ದಿನಾಚರಣೆ"