



ಬಂಟ್ವಾಳ: ನೆಟ್ಲ ನಿಟಿಲಾಪುರದಲ್ಲಿರುವ ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಜರಗುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನಡೆದವು. ಶನಿವಾರ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ಶ್ರೀದೇವರ ಲಕ್ಷದೀಪೋತ್ಸವ ಸವಾರಿ ಹೊರಟು ರಾತ್ರಿ ಕ್ಷೇತ್ರದಲ್ಲಿ ಬಲಿ ಉತ್ಸವ ನೆರವೇರಿತು. ಸೋಮವಾರ ಶತರುದ್ರಾಭಿಷೇಕ ಹಾಗೂ ಸೂರ್ಯೋದಯದಿಂದ ಮಂಗಳವಾರ ಸೂರ್ಯೋದಯದವರೆಗೆ ಕಾರ್ತಿಕ ಅಖಂಡ ಭಜನೋತ್ಸವ ನಡೆಯಲಿದ್ದು, ಸುಮಾರು 22ರಷ್ಟು ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ. ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸುಬ್ರಹ್ಮಣ್ಯ ಭಟ್, ಸದಸ್ಯರಾದ ಪ್ರಧಾನ ಅರ್ಚಕ ಸಂಪ್ರೀತ್ ಭಟ್, ಪಿ.ಕುಮಾರಸ್ವಾಮಿ ನೆಟ್ಲ, ನವೀನ್ ಕುಮಾರ್ ಶೆಟ್ಟಿ ಚನಿಲ, ಸುಜಿತ್ ಕುಮಾರ್ ಕಲ್ಲಡ್ಕ, ಅನಿಲ್ ಕುಮಾರ್ ನೆಟ್ಲ, ದಿವ್ಯಾ ರಮೇಶ್ ಪೂಜಾರಿ ಹೊಸಕಟ್ಟ, ಸುಚಿತ್ರ ಅನಂತ ಭಟ್ ಪಳನೀರು, ಭವ್ಯ ಐತಪ್ಪ ನಾಯ್ಕ ನೆಟ್ಲ ಸಹಿತ ವಿವಿಧ ಸಮಿತಿಗಳ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
Be the first to comment on "ನೆಟ್ಲ: ಶ್ರೀ ನಿಟಿಲಾಕ್ಷನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ"