ಕೇವಲ ಆರು ವರ್ಷಗಳ ಹಿಂದೆ 44 ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಶಾಲೆಯಲ್ಲೀಗ 200 ಮಕ್ಕಳು. ಪೂರ್ವಪ್ರಾಥಮಿಕದಿಂದ ಎಂಟನೇ ತರಗತಿವರೆಗಿನ ಶಿಕ್ಷಣ ನೀಡುವ ಈ ಶಾಲೆಯಲ್ಲಿ ಸರ್ಕಾರದ ಅಧಿಕೃತ ಅನುಮತಿಯೊಂದಿಗೆ ಭಾನುವಾರ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳು ಉದ್ಘಾಟನೆಗೊಂಡಿತು. . ಜೊತೆಗೆ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ದೊರಕಿತು.
ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತರಿ ಮೂಲಕ ಶಾಲೆಯಲ್ಲಿ ಮಾಡಿದ ಎರೆಹುಳ ಗೊಬ್ಬರ ಘಟಕದ ಉದ್ಘಾಟನಾ ಕಾರ್ಯಕ್ರಮವೂ ನೆರವೇರಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟನಾ ಕಾರ್ಯ ನೆರವೇರಿಸಿದರು. ನಾಲ್ಕು ವರ್ಷಗಳ ಹಿಂದೆ ಶಾಸಕರು ನೆಟ್ಟ ಅಡಿಕೆ ಗಿಡದ ಕೊಯಿಲನ್ನು ಶಾಸಕರೇ ಮಾಡಿದರು. ಇದೇ ವೇಳೆ ಶಾಲಾ ಬೇಡಿಕೆಗಳ ಪಟ್ಟಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಟ್ಲ ಸಮುದಾಯ ಆರೋಗ್ಯ ಉಪಕೇಂದ್ರದ ವತಿಯಿಂದ ಕೋವಿಡ್ ತಪಾಸಣೆ ಸಹಿತ ಆರೋಗ್ಯ ತಪಾಸಣೆಯೂ ನಡೆಯಿತು. ಭಾನುವಾರದ ಕಾರ್ಯಕ್ರಮದಲ್ಲಿ ದತ್ತು ಪಡೆದ ಸಂಸ್ಥೆ ಮಾತಾ ಡೆವಲಪರ್ಸ್ ನ ಮುಖ್ಯಸ್ಥ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಿವಿಲ್ ಇಂಜಿನಿಯರ್ ಸಂತೋಷ್ ಶೆಟ್ಟಿ ಅರೆಬೆಟ್ಟು, ವೀರಕಂಭ ಗ್ರಾಪಂ ಅಧ್ಯಕ್ಷ ದಿನೇಶ್, ಸದಸ್ಯರಾದ ಜಯಂತಿ, ಮೀನಾಕ್ಷಿ, ಉಮಾವತಿ, ಸಂದೀಪ್ ಪೂಜಾರಿ, ಜಯಪ್ರಸಾದ್, ತಾ.ಪಂ. ಮಾಜಿ ಸದಸ್ಯರಾದ ಮಾಧವ ಮಾವೆ, ಗೀತಾ ಚಂದ್ರಶೇಖರ್, ನಿವೃತ್ತ ಮುಖ್ಯ ಶಿಕ್ಷಕ ವಿಠಲ ಶೆಟ್ಟಿ, ಹಿರಿಯರಾದ ನಗ್ರಿ ಮೂಲೆ ಈಶ್ವರ ಭಟ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ, ಸಮಿತಿ ಸದಸ್ಯರು ಹಾಗೂ ಪ್ರಮುಖರಾದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ ಮತ್ತಿತರರು ಹಾಜರಿದ್ದರು, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕ ವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಇತರ ವಿವರಗಳಿಗೆ ಮುಂದೆ ಓದಿರಿ.
ಶಾಲಾ ಹಳೆ ವಿದ್ಯಾರ್ಥಿ, ಉದ್ಯಮಿ, ಸಿವಿಲ್ ಇಂಜಿನಿಯರ್ ಸಂತೋಷ್ ಶೆಟ್ಟಿ ಅರೆಬೆಟ್ಟು ಅವರ ಮಾಲೀಕತ್ವದ ಮಾತಾ ಡೆವಲಪರ್ಸ್ ಶಾಲೆಯನ್ನು 2018ರಲ್ಲಿ ದತ್ತು ಸ್ವೀಕರಿಸಿದ್ದು, ಸಾಕಷ್ಟು ಅಭಿವೃದ್ಧಿಗೆ ಕೊಡುಗೆ ನೀಢಿದೆ. ಅದಲ್ಲದೆ, ಸಂಜೀವ ಮೂಲ್ಯ ಅಧ್ಯಕ್ಷತೆಯ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್.ಕೆ. ನೇತೃತ್ವದ ಅನುಭವಿ ಶಿಕ್ಷಕರ ತಂಡ ವಿದ್ಯಾರ್ಥಿಗಳಿಗೆ ಸಾಕಷ್ಟು ಪೂರಕವಾದ ವಾತಾವರಣ ನಿರ್ಮಿಸಿದೆ. ಪರಿಸರ ಮಿತ್ರ ಶಾಲೆ ಎಂದು ಎರಡೆರಡು ಬಾರಿ ಪ್ರಶಸ್ತಿ ಪಡೆದ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಜಿಲ್ಲಾ ಮಟ್ಟದಲ್ಲಿ ಪಡೆದ ಇಬ್ಬರು ಶಿಕ್ಷಕರು (ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್.ಕೆ, ಮತ್ತು ಶಿಕ್ಷಕಿ ಸಂಗೀತಾ ಶರ್ಮ) ಇಲ್ಲಿದ್ದಾರೆ. ಆರಂಭದಲ್ಲಿ ಬಂಟ್ವಾಳ ತಾಲೂಕು ಫೊಟೋಗ್ರಾಫರ್‍ಸ್ ಎಸೋಸಿಯೇಶನ್ ಸದಸ್ಯ, ಇಲ್ಲಿನ ಹಳೇ ವಿದ್ಯಾರ್ಥಿ ಚಿನ್ನ ಮೈರ ಶಾಲೆಯ ಬಗ್ಗೆ ಪ್ರೀತಿಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿ ತನ್ನ ಫೊಟೋಗ್ರಾಫರ್ಸ್ ಸಂಘದ ಗಮನ ಸೆಳೆದಿದ್ದರು. ಹಲವು ಕಾರ್ಯಕ್ರಮಗಳನ್ನು ಫೊಟೋಗ್ರಾಫ್ಸ್ ಸಂಘ ಈ ಶಾಲೆಗೆ ನೀಡುತ್ತಾ ಬಂತು. ಬಳಿಕ ಲಾರ್ಸನ್ ಆಂಡ್ ಟಾರ್ಬೋ (ಎಲ್.ಆಂಡ್ ಟಿ) ಕಂಪನಿಯವರ ಸಾಮಾಜಿಕ ಸೇವಾ ವಿಭಾಗದ ವತಿಯಿಂದ ಸೌರವಿದ್ಯುತ್ ಒದಗಿತು. ವಿವಿಧ ದಾನಿಗಳು ಶಾಲಾ ಅಭಿವೃದ್ಧಿಗೆ ನೆರವಾದರು. ಎಂ.ಆರ್.ಪಿ.ಎಲ್. ನಿಂದ ಹತ್ತು ಕೊಠಡಿ ನಿರ್ಮಾಣವಾಗಿದೆ. ಲಯನ್ಸ್ ಕ್ಲಬ್ ಬಂಟ್ವಾಳ ಸ್ಮಾರ್ಟ್ ಕ್ಲಾಸ್ ಒದಗಿಸಿದ್ದಾರೆ. ಇದೀಗ ಶಾಲೆ ದತ್ತು ಸ್ವೀಕಾರದ ಬಳಿಕ ಮತ್ತಷ್ಟು ಪ್ರಗತಿಯತ್ತ ಮುನ್ನಡೆಯುತ್ತಿದೆ.
Be the first to comment on "ಶತಮಾನೋತ್ಸವ ಸಂಭ್ರಮದಲ್ಲಿರುವ ಮಜಿ ಸರ್ಕಾರಿ ಶಾಲೆಯಲ್ಲೀಗ ಆಂಗ್ಲ ಮಾಧ್ಯಮದೊಂದಿಗೆ ಕೃಷಿ ಕಲಿಕೆ"