ಬಂಟ್ವಾಳ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಬಿಜೆಪಿಯ 69ನೇ ವಾರ್ಡ್ ಸಮಿತಿ ವತಿಯಿಂದ ಬಂಟ್ವಾಳ ಬಿ.ಸಿ.ರೋಡಿನ ಕೈಕಂಬದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಯನ್ನು ಗೌರವಿಸುವ ಕಾರ್ಯ ನಡೆಯಿತು.
ವೈದ್ಯೆ ಡಾ. ಅಶ್ವಿನಿ, ದಾದಿಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಗೌರವಿಸಿದರು. ಈ ಸಂದರ್ಭ ಪ್ರಾಸ್ತಾವಿಕವಾಗಿ ವಾರ್ಡ್ ಸಮಿತಿ ಅಧ್ಯಕ್ಷ ಕೆ. ಸದಾಶಿವ ಪ್ರಭು ಮಾತನಾಡಿದರು. 69ನೇ ವಾರ್ಡ್ ಗೊಳಪಟ್ಟ ಪುರಸಭಾ ಸದಸ್ಯೆ ಶಶಿಕಲಾ, ಬಿಜೆಪಿಯ ಪ್ರಮುಖರಾದ ಪ್ರಕಾಶ್ ಅಂಚನ್, ಆನಂದ ಶಂಭೂರು, ಪ್ರದೀಪ್ ಅಜ್ಜಿಬೆಟ್ಟು, ಅಶ್ವತ್ಥ್ ರಾವ್ ಬಾಳಿಕೆ, ವಾರ್ಡ್ ಪ್ರಮುಖರಾದ ಲೋಹಿತ್, ಬಿ.ನರೇಂದ್ರ ನಾಯಕ್, ಮನೋಜ್, ವಿಶ್ವನಾಥ್, ಸುಜಾತಾ ಭಂಡಾರಿ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ನಗರ 69ನೇ ವಾರ್ಡ್ ಬಿಜೆಪಿಯಿಂದ ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಗೌರವಾರ್ಪಣೆ"