




ಬಂಟ್ವಾಳ: ಶನಿವಾರ ಬೆಳಗ್ಗೆ ಮಂಗಳೂರು ಬಿಸಿರೋಡು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮಂಗಳೂರಿನ ಆನಂದಿತ್, ಶರತ್, ಶುಸಾನ್, ಹರ್ಷ ಮತ್ತು ಶ್ರೀರಾಮ್ ಎಂಬವರು ಗಾಯಗೊಂಡವರು. ಇವರಲ್ಲಿ ಇಬ್ಬರಿಗೆ ಹೆಚ್ಚಿನ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಮಂಗಳೂರಿನಿಂದ ಪುತ್ತೂರು ಕಡೆಗೆ ವಿದ್ಯಾರ್ಥಿಗಳ ಸಹಿತ ಡಾಕ್ಯುಮೆಂಟರಿ ಚಿತ್ರ ತೆಗೆಯುವ ಇಬ್ಬರು ಕಾರಿನಲ್ಲಿದ್ದರು. ರಾಮಲ್ ಕಟ್ಟೆ ತಲುಪಿದ ವೇಳೆ ರಸ್ತೆ ಬದಿಯ ಮರವೊಂದಕ್ಕೆ ಕಾರು ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿತು. ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್. ಐ.ರಾಜೇಶ್ ಕೆ.ವಿ. ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Be the first to comment on "ರಾಮಲ್ ಕಟ್ಟೆ: ಮರಕ್ಕೆ ಡಿಕ್ಕಿಯಾದ ಕಾರು, ಐವರಿಗೆ ಗಾಯ"