ಬಂಟ್ವಾಳ: ಮಹಮ್ಮಾಯಿ ಸೇವಾ ಸಮಿತಿ ದಿಂಡಿಕೆರೆ ನರಿಕೊಂಬು ಹಾಗೂ ಮಹಮ್ಮಾಯಿ ಕ್ರಿಕೆಟರ್ಸ್ ದಿಂಡಿಕೆರೆ ವತಿಯಿಂದ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣ ಮತ್ತು ಸಂಘದ ಕಚೇರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷೆ ವಿನುತ ಪುರುಷೋತ್ತಮ್, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಸದಸ್ಯ ಚೇತನ್ ಏಲಬೆ, ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ಏಲಬೆ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡ ಯೋಗೀಶ್ ಶ್ರೀಯಾನ್, ಸೀತಾರಾಮ ಶೇಡಿಗುರಿ, ಯಶೋಧರ ಬಂಗೇರ ಕೊಲ್ಲೂರು, ನಾಗರಾಜ ಏಲಬೆ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಸದಸ್ಯ ಪ್ರೇಮನಾಥ ಶೆಟ್ಟಿ ಅಂತರ, ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಎಎಂಆರ್ ನ ವಿಘ್ನೇಶ್ವರ, ಉದ್ಯಮಿಗಳಾದ ಗಣೇಶ್ ಕುಲಾಲ್, ತಾರನಾಥ ಏಲಬೆ, ಪದ್ಮನಾಭ ಮಯ್ಯ, ಜಿನರಾಜ್ ಕೋಟ್ಯಾನ್, ವಸಂತ ಕುಲಾಲ್ ಭೀಮಗದ್ದೆ, ಕಮಲಾಕ್ಷ ಭೀಮಗದ್ದೆ, ಮಾಧವ ಕರ್ಬೆಟ್ಟು, ಸುರೇಶ್ ಕೋಟ್ಯಾನ್, ರಂಜಿತ್ ಮಾಣಿಮಜಲು, ಶ್ರೀಶ ರಾಯಸ, ಯೊಗೀಶ್ ಅಮೀನ್, ಸಂಜೀವ ಐ ಪೂಜಾರಿ, ಪಂಚಾಯತ್ ಸದಸ್ಯರಾದ ರಂಜಿತ್ ಕೆದ್ದೇಲು, ರವಿ ಅಂಚನ್, ಕಿಶೋರ್ ಶೆಟ್ಟಿ ಅಂತರ, ಅರುಣ್ ಕುಲಾಲ್ ನಾಯಿಲ, ಸಂತೋಷ ಶಂಭೂರು, ಉಷಾಲಾಕ್ಷಿ, ಶುಭಾ ಶಶಿಧರ್, ಹೇಮಾವತಿ ಶಂಭೂರು ಮೋಹಿನಿ ನಾಟಿ, ನಾರಾಯಣ ಪೂಜಾರಿ ದರ್ಖಾಸು, ಪ್ರಮುಖರಾದ ಶಶಿಧರ ಮಾಣಿಮಜಲು, ಉದಯ ಕುಮಾರ್ ಶೆಟ್ಟಿ, ಮನೋಜ್ ನಿರ್ಮಲ್, ವೆಂಕಟ್ರಾಯ ಕಾಮತ್, ಸುಧೀರ್ ಮಾಣಿಮಜಲು, ಪ್ರವೀಣ್ ಪಿ.ಜೆ. ಪಲ್ಲತ್ತಿಲ, ಕಿಶೋರ್ ಏಲಬೆ, ಮಹಮ್ಮಾಯಿ ಸೇವಾ ಸಮಿತಿ ಸದಸ್ಯರು, ಊರ ಮಹನೀಯರು ಉಪಸ್ಥಿತರಿದ್ದರು. ಮಹೇಶ್ ರಾಯಸ ಸ್ವಾಗತಿಸಿದರು, ಚೇತನ್ ಏಲಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯ, ಮೊನಿಷಾ,ಮಮತಾ ಪ್ರಾರ್ಥಿಸಿದರು, ನಾಗೇಶ್ ಪೂಜಾರಿ ವಂದಿಸಿದರು, ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನರಿಕೊಂಬು ಗ್ರಾಮದ ದಿಂಡಿಕೆರೆಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ"