





ಬಂಟ್ವಾಳ: ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಪ್ರಕಾಶ್ ಬಿ.ಶೆಟ್ಟಿ ಶ್ರೀಶೈಲ ತುಂಬೆ ಆಯ್ಕೆಗೊಂಡಿದ್ದಾರೆ. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮಿನಿ ಹಾಲ್ ನಲ್ಲಿ ಸಭೆ ನಡೆಯಿತು.
ಉಪಾಧ್ಯಕ್ಷರುಗಳಾಗಿ ರಾಜಾ ಚಂಡ್ತಿಮಾರ್, ಜಗನ್ನಾಥ್ ಬಂಟ್ವಾಳ, ಸಯ್ಯದ್ ಅಬ್ದುಲ್ ಕರೀಂ, ಪ್ರಧಾನ ಕಾರ್‍ಯದರ್ಶಿಯಾಗಿ ಬಿ.ಶೇಖರ್, ಸಹಕಾರ್‍ಯದರ್ಶಿಯಾಗಿ ಸುರೇಶ್ ಕುಮಾರ್ ಬಂಟ್ವಾಳ್ ಮರು ಆಯ್ಕೆಗೊಂಡರು, ರಿಚರ್‍ಡ್ ಶಂಭೂರು ಹಾಗೂ ಬದ್ರುದ್ದೀನ್ ನಾವೂರು ನೂತನ ಸಹಕಾರ್‍ಯದರ್ಶಿಗಳಾಗಿ ಆಯ್ಕೆಗೊಂಡರು. ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಚಂದ್ರಶೇಖರ ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ಸುರೇಂದ್ರ ಕೋಟ್ಯಾನ್ ಮರುಆಯ್ಕೆಗೊಂಡರು.


Be the first to comment on "ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಶ್ರೀಶೈಲ"