





ಬಂಟ್ವಾಳ: ರೋಟರಿ ಕ್ಲಬ್ ಟೌನ್ ಬಂಟ್ವಾಳ ವತಿಯಿಂದ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಭೇಟಿ ನೀಡಲಾಯಿತು. ಈ ಸಂದರ್ಭ ಸ್ಥಳೀಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. ಕೇಂದ್ರದ ಸಂಸ್ಥಾಪಕ ನಿವೃತ್ತ ಪ್ರಾಧ್ಯಾಪಕ ಡಾ. ತುಕಾರಾಮ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣ ದಂಪತಿ ಹಾಗೂ ಕ್ಲಬ್ ಸದಸ್ಯೆ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಹೇಮಲತಾ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷ ಶನ್ಫತ್ ಶರೀಫ್, ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಎಕ್ಸಿಕ್ಯುಟಿವ್ ಸೆಕ್ರೆಟರಿ ಕಿಶೋರ್ ಕುಮಾರ್, ಖಜಾಂಚಿ ಸುರೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ಜಯರಾಜ್ ಎಸ್. ಬಂಗೇರ, ಕ್ಲಬ್ ಹಿರಿಯ ಸದಸ್ಯರಾದ ನರೇಂದ್ರನಾಥ ಭಂಡಾರಿ, ನಾರಾಯಣ ಸಿ.ಪೆರ್ನೆ, ಸುಕುಮಾರ್ ಬಂಟ್ವಾಳ ಮುಂತಾದವರು ಇದ್ದರು.
Be the first to comment on "ಶಿಕ್ಷಕರ ದಿನಾಚರಣೆ ಹಿನ್ನೆಲೆ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಸದಸ್ಯರಿಂದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಭೇಟಿ, ಗೌರವಾರ್ಪಣೆ ಕಾರ್ಯಕ್ರಮ"