ಬಂಟ್ವಾಳ: ಲೊರೆಟ್ಟೊ ಸಮೀಪ ಬಾರೆಕಾಡು ಪಕ್ಕ ಆಟವಾಡಲು ತೆರಳಿದ ಬಾಲಕ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ. ಬಂಟ್ವಾಳ ಕಸ್ಬಾ ಗ್ರಾಮದ ಬಾರೆಕಾಡು ಕ್ವಾರ್ಟರ್ಸ್ ನಿವಾಸಿ ಮಹಮ್ಮದ್ ಸಾದೀಕ್ ಎಂಬವರ ಪುತ್ರ ಮಹಮ್ಮದ್ ಸೌಹಾದ್ (12) ಮೃತ ಬಾಲಕ. ಆರನೇ ತರಗತಿಯಲ್ಲಿ ಕಲಿಯುತ್ತಿದ್ದ ಈತ ಶಾಲೆ ಇಲ್ಲದ ಹಿನ್ನೆಲೆಯಲ್ಲಿ ಮನೆ ಪಕ್ಕ ಖಾಸಗಿ ಜಾಗದಲ್ಲಿದ್ದ ಸುತ್ತ ಬೇಲಿ ಹಾಕಲಾಗಿದ್ದ ಕಲ್ಲಿನ ಕ್ವಾರೆ ಬಳಿ ಆಟವಾಡಲು ತನ್ನಿಬ್ಬರು ಸ್ನೇಹಿತರೊಂದಿಗೆ ತೆರಳಿದ್ದ. ಈ ಸಂದರ್ಭ ಆಯತಪ್ಪಿ ಕ್ವಾರೆಗೆ ಬಿದ್ದಿದ್ದು ಸ್ಥಳೀಯರು ಮೇಲಕ್ಕೆತ್ತಿದರೂ ಆಸ್ಪತ್ರೆಗೆ ಕರೆತರುವ ವೇಳೆ ಕೊನೆಯುಸಿರೆಳೆದಿದ್ದು, ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆಟವಾಡಲು ತೆರಳಿದ್ದ 12ರ ಹರೆಯದ ಬಾಲಕ ಮೃತ್ಯು"