ಬಂಟ್ವಾಳ: ಹಾಲ್ ಮಾರ್ಕ್ ಗೆ ನಮಗೆ ಸ್ವಾಗತ ಆದರೆ ಎಚ್.ಯು.ಐ.ಡಿ. ನಮಗೆ ಬೇಡ ಎಂದು ಆಗ್ರಹಿಸಿ, ರಾಷ್ಟ್ರದಾದ್ಯಂತ ನಡೆಯುತ್ತಿರುವ ಆಭರಣ ವರ್ತಕರ ಪ್ರತಿಭಟನೆಯ ಅಂಗವಾಗಿ ಬಂಟ್ವಾಳದ ಜ್ಯುವೆಲರಿಗಳ ಮಾಲೀಕರು ಮತ್ತು ಸಿಬ್ಬಂದಿ ಅಸೋಸಿಯೇಶನ್ ಪದಾಧಿಕಾರಿಗಳೊಂದಿಗೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಜ್ಯುವೆಲರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಬಿ.ಸುರೇಶ್ ದಾಮೋದರ್ ಬಾಳಿಗಾ, ಆಭರಣದ ಮೇಲೆ ಎಚ್,ಯು.ಐ.ಡಿ. ಕಡ್ಡಾಯವಾಗಿ ಅಳವಡಿಸುವ ಕಾಯ್ದೆಯ ವಿರುದ್ದ ಎಲ್ಲಾ ಜ್ಯುವೆಲರ್ಸ್ ಮಾಲೀಕರು ಸೇರಿದ್ದೇವೆ. ಕೋವಿಡ್ ನ ಈ ಸಮಯದಲ್ಲಿ ಈ ಕಾಯ್ದೆಯಿಂದ ಸಾಕಷ್ಟು ತೊಂದರೆಗಳಾಗುತ್ತದೆ ಎಂದು ಹೇಳಿದರು. ಬಳಿಕ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರಿಗೂ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜೊತೆ ಕಾರ್ಯದರ್ಶಿ ಸುನಿಲ್ ಬಿ, ವಿಶ್ವನಾಥ ಬಂಟ್ವಾಳ್, ಯುವರಾಜ ಆಚಾರ್ಯ, ಸತೀಶ ಭಂಡಾರಿ, ಹನೀಫ್, ಶಿವಾಜಿ ಜಾಧವ್, ಯೋಗೀಶ್ ನಾಯಕ್ ಸಹಿತ ಬಂಟ್ವಾಳದ ಎಲ್ಲ ಆಭರಣದಂಗಡಿಗಳ ವರ್ತಕರು, ಅಸೋಶಿಯೇಶನ್ ಪದಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸುನಿಲ್ ಬಿ. ಸ್ವಾಗತಿಸಿದರು. ಗಿರೀಶ್ ಪೈ ವಂದಿಸಿದರು.
Be the first to comment on "ಎಚ್.ಯು.ಐ.ಡಿ. ವಿರೋಧಿಸಿ ಬಂಟ್ವಾಳದಲ್ಲಿ ಆಭರಣ ವರ್ತಕರ ಪ್ರತಿಭಟನೆ"