ಪ್ರತಿ ತಾಲೂಕಿಗೆ ಒಂದರಂತೆ ರೈತರ ಉತ್ಪಾದಕರ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವುದಾಗಿ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಂಟ್ವಾಳ ನಿರೀಕ್ಷಣಾ ಮಂದಿರಕ್ಕೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿದ ಸಂದರ್ಭ ಅವರು ಬಂಟ್ವಾಳ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕೇಂದ್ರದ ನೂತನ ಸಚಿವೆ ಭಗವದ್ಗೀತೆ ನೀಡಿ ಅಭಿನಂದಿಸಿ, ಸಚಿವೆ ಶೋಭಾ ಕರಂದ್ಲಾಜೆಯವರೊಂದಿಗೆ ಸಹೋದರತ್ವದ ಪ್ರತೀಕವಾದ ರಕ್ಷಾಬಂಧನ ಆಚರಿಸಿದರು. ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಕೋಟಿ-ಚೆನ್ನಯರ ಚರಿತ್ರೆ ಪುಸ್ತಕವನ್ನು ಸಚಿವೆಗೆ ನೀಡಿ ಅಭಿನಂದಿಸಿದರು.ಈ ಸಂದರ್ಭ ರಾಜ್ಯ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಸುಲೋಚನಾ ಜಿ.ಕೆ ಭಟ್,ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ರಮಾನಾಥ ರಾಯಿ, ಚಿದಾನಂದ ರೈ ಕಕ್ಯ, ಗಣೇಶ್ ರೈ ಮಾಣಿ, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ ವಾಮದಪದವು, ನಂದರಾಮ ರೈ,ಆನಂದ ಶಂಭೂರು, ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು.
Be the first to comment on "ತಾಲೂಕಿಗೊಂದರಂತೆ ರೈತರ ಉತ್ಪಾದಕರ ಸಂಸ್ಥೆ: ಬಂಟ್ವಾಳದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ"