ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷರಾದ ರಿಯಾಝ್ ಹುಸೈನ್ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಶಾಫಿ ಉಪಸ್ಥಿತರಿದ್ದು ಧ್ವಜಾರೋಹಣಗೈದರು. ಬಂಟ್ವಾಳ ಜುಮ್ಮಾ ಮಸೀದಿಯ ಕಾರ್ಯದರ್ಶಿ ಫಾರೂಕ್ ಅಬ್ದುಲ್ ರಹಿಮಾನ್, ತೌಹೀದ್ ಆಡಳಿತ ಮಂಡಳಿಯ ಸದಸ್ಯರಾದ ಮೋನಿಶ್ ಅಲಿ, ಹಾರೂನ್ ರಶೀದ್, ಉಬೈದುಲ್ಲ, ಇಮ್ರಾನ್ ಜಿ.ಕೆ, ರಿಯಾಝ್ ಹಾಜರಿದ್ದರು. ತೌಹೀದ್ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಮೆಟಿಲ್ಡಾ ಡಿ’ಕೋಸ್ತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರಚನಾ , ಶಿಕ್ಷಕ ಶಿಕ್ಷಕೇತರ ವರ್ಗ ಹಾಗೂ ಬಂಟ್ವಾಳ ಜಮಾತಿನ ಸದಸ್ಯರು ಉಪಸ್ಥಿತರಿದ್ದರು. ತೌಹೀದ್ ಶಾಲಾ ಶಿಕ್ಷಕಿಯರಾದ ಮಲ್ಲಿಕಾ ಸ್ವಾಗತಿಸಿ, ಶೈನಾಝ್ ನಿರೂಪಿಸಿ, ದಿವ್ಯ ವಂದಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ"