





ಬಂಟ್ವಾಳ ತಾಲೂಕಿನ ಪುಣಚದ ವೆಂಕಟರಮಣ ಪುಣಚ ಮತ್ತು ಪುತ್ತೂರಿನ ಶ್ರೀಕೃಷ್ಣ ಶಾಸ್ತ್ರಿ ಅವರು ನುರಿತ ಪಾಕಶಾಸ್ತ್ರಜ್ಞರು. ವೈವಿಧ್ಯಮಯ ತಿನಿಸುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು. ಕಳೆದ ವಾರವಷ್ಟೇ ಅವರು ತಯಾರಿಸಿದ ಹೊಸ ಪ್ರಯೋಗ ಕೊಕ್ಕೊ ಬೀಜದಲ್ಲಿ ಮಾಡಿದ ಹೋಳಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗುತ್ತಿದೆ. ಚಾಕೊಲೇಟ್ ನಂಥದ್ದನ್ನು ತಯಾರಿಸಲು ಉಪಯೋಗಿಸುವ ಕೊಕ್ಕೊವನ್ನು ಹೋಳಿಗೆಗೆ ಯಾಕೆ ಬಳಸಬಾರದು ಎಂದು ಯೋಚಿಸಿ, ಪ್ರಯೋಗಿಸಿ ಯಶಸ್ವಿಯೂ ಆಗಿದ್ದಾರೆ.ಬಿಸಿಬಿಸಿ ಹೋಳಿಗೆ ಮಾಡಿದ್ದೆಲ್ಲವೂ ಖಾಲಿಯಾಗುತ್ತಿವೆ, ಡಿಮಾಂಡೂ ಜಾಸ್ತಿ ಇದೆ ಎನ್ನುತ್ತಾರೆ ವೆಂಕಟರಮಣ. ಆದರೆ ಕೊಕ್ಕೊ ಸ್ವಲ್ಪ ಕಾಸ್ಟ್ಲಿ. ಹೀಗಾಗಿ ಹೋಳಿಗೆಯ ಮೇಕಿಂಗ್ ಚಾರ್ಜ್ ಜಾಸ್ತಿಯಾಗುತ್ತದೆ. ಚಾಕೊಲೇಟ್ ಸ್ವಾದ ಇದೆ ಎಂದು ಸವಿದವರು ಹೇಳಿದ್ದಾರೆ ಎನ್ನುತ್ತಾರೆ ವೆಂಕಟರಮಣ ಪುಣಚ. ಅವರ ದೂರವಾಣಿ ಸಂಖ್ಯೆ ಹೀಗಿದೆ. 94480 34046.
Be the first to comment on "ಚಾಕೊಲೇಟ್ ಸ್ವಾದ..,, ಇದು ಕೊಕ್ಕೊದಿಂದ ಮಾಡಿದ ಹೋಳಿಗೆ"