





ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಗುರುವಾರ ವ್ಯಾಪಕ ಹಾನಿ ಸಂಭವಿಸಿದೆ. ಪೆರಾಜೆ ಗ್ರಾಮದ ಏನಾಜೆ ಎಂಬಲ್ಲಿ ಕಾಂತಪ್ಪ ಕುಲಾಲ್ ಅವರ ಮನೆಗೆ ಭಾಗಶಃ ಹಾನಿ ಉಂಟಾಗಿದೆ. ನಾವೂರು ಗ್ರಾಮದ ಸೆಬಾಸ್ಟಿಯನ್ ಆಲ್ಪುಕರ್ಕ್ ಎಂಬವರ ವಾಸ್ತವ್ಯದ ಮನೆ ಕುಸಿದುಬಿದ್ದಿದೆ. ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿ ಮಹಮ್ಮದ್ ಎಂಬವರ ಮನೆಗೆ ಹಾನಿ ಆಗಿದೆ. ಬಾಳೆಪುಣಿ ಗ್ರಾಮದಲ್ಲಿ ವಿಶ್ವನಾಥ ಎಂಬವರ ಅಡಕೆ ತೋಟಕ್ಕೆ ನೀರು ನುಗ್ಗಿದೆ. ವಿಟ್ಲ ಕಸಬಾದ ವಿ.ಕೆ.ಅಬ್ಬಾಸ್ ಎಂಬವರ ಮನೆ ಭಾಗಶಃ ಹಾನಿ ಸಂಭವಿಸಿದೆ. ಶಂಭೂರು ಇರಂತಬೆಟ್ಟು ಎಂಬಲ್ಲಿ ಕೃತಕ ನೆರೆಯಿಂದ ಶೀನ ಶೆಟ್ಟಿ ಅವರ ತೋಟಕ್ಕೆ ನೀರು ನುಗ್ಗಿದೆ. ಸುಜೀರ್ ಕೊಡಂಗೆಯ ಲಕ್ಷ್ಮಣ ಪೂಜಾರಿ ಅವರ ಮನೆಗೆ ದರೆ ಜರಿದು ಹಾನಿಯಾಗಿದೆ. ಬಿ.ಸಿ.ರೋಡಿನ ಪೊನ್ನೋಡಿ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ಬುಡದಲ್ಲಿ ತೂತು ಕಾಣಿಸಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸಲಾಯಿತು.
Be the first to comment on "ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ಭಾರಿ ಮಳೆಗೆ ವ್ಯಾಪಕ ಹಾನಿ"