ಬಂಟ್ವಾಳ: ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ – 2021ರ ಪ್ರಯುಕ್ತ ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ಮನೆಗೊಂದು ಶ್ರೀಗಂಧದ ಗಿಡ ಶ್ರೀಗಂಧ ಬೆಳೆಯೋಣ ಯೋಜನೆಯ ಆರಂಭೋತ್ಸವವನ್ನು ಶ್ರೀ ಗುರುದೇವಾನಂದ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಹಣ್ಣು ಹಂಪಲಿನ ಗಿಡಗಳನ್ನುನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸಲು ಸಹಕರಿಸುವುದರೊಂದಿಗೆ ಔಷದೀಯ ಗಿಡಗಳನ್ನು ಬೆಳೆಸುವ ಯೋಚನೆ ಇದೆ ಎಂದ ಸ್ವಾಮೀಜಿ, ಕ್ಷೇತ್ರದ ಮೂಲಕ ಸಮಾಜ ಮುಖಿ ಕಾರ್ಯಗಳು ನಡೆಯುತ್ತಿವೆ ಎಂದರುಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಕೆಲವೊಂದು ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಗಿಡ ನೆಡುವ ಕಾರ್ಯಕ್ರಮ ಆಯೋಜನೆಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮಾತನಾಡಿ, ಶ್ರೀಗಂಧದ ಬೀಡು ಈ ತುಳು ನಾಡಾಗಬೇಕೆಂದು ಸ್ವಾಮೀಜಿ ಇಚ್ಚೆಯಾಗಿದೆ. ನಾವು ಪ್ರಕೃತಿಯೊಟ್ಟಿಗೆ ಬದುಕುವ ಜಾಯಮಾನವನ್ನು ಬೆಳೆಸಬೇಕು. ಎಂದರು.ವೇದಿಕೆಯಲ್ಲಿ ಸಾದ್ವೀ ಶ್ರೀ ಮಾತಾನಂದಮಯಿ, ಮಂಗಳೂರು ವಲಯಾರಣ್ಯಾಧಿಕಾರಿ ಶ್ರೀಧರ್, ಪುತ್ತೂರು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳೆಗಾರ್, ಬಂಟ್ವಾಳ ಸಾಮಾಜಿಕ ಅರಣ್ಯಾಧಿಕಾರಿ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಭಂಡಾರಿ ಪ್ರಾರ್ಥಿಸಿದರು, ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಯಶವಂತ ವಿಟ್ಲ ಹಾಗೂ ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಒಡಿಯೂರು ಕ್ಷೇತ್ರದಲ್ಲಿ ಮನೆಗೊಂದು ಶ್ರೀಗಂಧದ ಗಿಡ ಶ್ರೀಗಂಧ ಬೆಳೆಯೋಣ ಯೋಜನೆಯ ಆರಂಭೋತ್ಸವ"