ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರೂ ಆಗಿರುವ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ, ವೇದಾಧ್ಯಯನ ಮಾಡುವುದಷ್ಟೇ ಅಲ್ಲದೆ, ಸ್ವ ಆಸಕ್ತಿಯಿಂದ ತಂದೆ ಜೊತೆ ಮದುವೆ ಸಮಾರಂಭಗಳಲ್ಲಿ ಸಹಾಯಕಳಾಗಿ ಪೌರೋಹಿತ್ಯ ಮಾಡುವಷ್ಟು ಸಮರ್ಥಳಾಗಿ ಗಮನ ಸೆಳೆದಿದ್ದಾಳೆ. ಬಂಟ್ವಾಳ ತಾಲೂಕಿನ ದಾಸಕೋಡಿ ಸಮೀಪ ಕಶೆಕೋಡಿ ಎಂಬಲ್ಲಿರುವ ಪುರೋಹಿತ, ವೈದಿಕ ಮನೆತನದ ಸೂರ್ಯನಾರಾಯಣ ಭಟ್ಟರ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತದೆ. ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಮಕ್ಕಳು ಬರುತ್ತಾರೆ. ವೈದಿಕ ಮನೆತನ ಅನಘಾಗೆ ಪೂರಕ ವಾತಾವರಣವಾಯಿತು. ಅನಘಾಳ ತಮ್ಮ ಆದಿತ್ಯಕೃಷ್ಣ ಈಗಾಗಲೇ ವೇದಾಭ್ಯಾಸ, ಪೌರೋಹಿತ್ಯದಲ್ಲಿ ಸಾಕಷ್ಟು ಆಸಕ್ತಿ ತೋರಿದ್ದು, ಅಭ್ಯಾಸನಿರತ. ಈ ಕುರಿತು ಮಾತನಾಡಿದ ಕಶೆಕೋಡಿ ಸೂರ್ಯನಾರಾಯಣ ಭಟ್, ವೇದ ಎಂದರೆ ಜ್ಞಾನ. ಇವತ್ತಿನ ಕಾಲಘಟ್ಟದಲ್ಲಿ ವೇದವನ್ನು ಅಧ್ಯಯನ ಮಾಡುವ ಅಗತ್ಯ ಎಲ್ಲರಿಗೂ ಇದೆ ಎಂದರು. ಅನಘಾ ವೇದಾಧ್ಯಯನ ನಿರತರಾಗಿರುವುದನ್ನು ಕಂಡು ಕಲ್ಲಡ್ಕ ಡಾ.ಪ್ರಭಾಕರ ಭಟ್ ಖುಷಿಪಟ್ಟಿದ್ದಾರೆ. ಲೆಯಲ್ಲಿ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿ ಇನ್ನಷ್ಟು ಮುಂದುವರಿಸಲು ಸಲಹೆ ನೀಡಿದ್ದಾರೆ. ಇದು ಅನಘಾಗೆ ಮತ್ತಷ್ಟು ಪ್ರೋತ್ಸಾಹ ದೊರಕಿತು. ಇದು ಆರಂಭವಷ್ಟೇ. ಇನ್ನಷ್ಟು ಅಧ್ಯಯಯನ ಮಾಡುವ ಆಸಕ್ತಿ ಅವಳಿಗಿದ್ದು, ನಮ್ಮೆಲ್ಲರ ಪ್ರೋತ್ಸಾಹ ಇದ್ದೇ ಇದೆ ಎನ್ನುತ್ತಾರೆ ಅವರ ತಂದೆ ಕಶೆಕೋಡಿ ಸೂರ್ಯನಾರಾಯಣ ಭಟ್,
ವೇದಾಧ್ಯಯನ ಪೌರೋಹಿತ್ಯ: ಬಾಲಕಿಯರಿಗೆ ಪ್ರೇರಣೆಯಾದ ಕಶೆಕೋಡಿಯ ಅನಘಾ
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವೇದಾಧ್ಯಯನ ಪೌರೋಹಿತ್ಯ: ಬಾಲಕಿಯರಿಗೆ ಪ್ರೇರಣೆಯಾದ ಕಶೆಕೋಡಿಯ ಅನಘಾ"