


ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂಥ “ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ. ಅಭಿಯಾನದ ಭಾಗವಾಗಿ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇದದ ಭಾಗವಾಗಿ ಕೊಳ್ನಾಡು, ವಿಟ್ಲ ಪಡ್ನೂರು, ಕೊಡಂಗಾಯಿ, ವಿಟ್ಲ ಮುಡ್ನೂರು, ಗೋಳ್ತಮಜಲು, ಮಂಚಿ, ಸಜಿಪ ನಡು, ಸಜಿಪ ಮೂಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು , ಬಾಲ ಕಾರ್ಮಿಕತೆಗೆ ಒಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕ್ಯಾಂಪಸ್ ಫ್ರಂಟ್ ಉಪಾಧ್ಯಕ್ಷ ಸಂಶುದ್ದೀನ್ ಮತ್ತುh ಉಪಾಧ್ಯಕ್ಷರಾದ ಇರ್ಶಾದ್ ಮತ್ತು ಸಮಿತಿ ಸದಸ್ಯರಾದ ಮುಕ್ತಾರ್, ನಾಸಿರ್ ಮತ್ತು ಯುನಿಟ್ ನಾಯಕರಾದಂತಹ ನಿಹಾಲ್, ಮಕ್ಶಿದ್, ಅನ್ವರ್, ಜಾಫರ್, ಮತ್ತು ಸದಸ್ಯರು ಉಪಸ್ಥಿತರಿದ್ಧರು.




Be the first to comment on "ಬಾಲಕಾರ್ಮಿಕತೆ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಮನವಿ"