



ಬಂಟ್ವಾಳ,: ತಾಲೂಕಿನ ತುಂಬೆಯ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ನೇತಾಡುತ್ತಿದ್ದ ಅಪಾಯಕಾರಿ ತಗಡು ಶೀಟ್ ಗಳ ತೆರವುಗೊಳಿಸುವ ಕಾರ್ಯಶುಕ್ರವಾರ ನಡೆಯಿತು. ಮೇಲ್ಛಾವಣಿಯಿಂದ ಕಿತ್ತು ನೇತಾಡುತ್ತಿದ್ದ ಅಪಾಯಕಾರಿ ತಗಟು ಶೀಟುಗಳನ್ನು ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ತೆರವುಗೊಳಿಸಿದರು. ಶೀಟ್ ನೇತಾಡುವುದನ್ನು ಗಮನಿಸಿದ ತುಂಬೆ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಸಾಲ್ಯಾನ್ ಅವರ ಮಾಹಿತಿಯಂತೆ, ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ಅವರು ತೆರಳಿ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಶೌಹಾನ್ ತುಂಬೆ, ಸಿದ್ದೀಕ್ ತುಂಬೆ ಸಹಕಾರ ನೀಡಿದರು.
Be the first to comment on "ತುಂಬೆ: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ನೇತಾಡುತ್ತಿದ್ದ ಅಪಾಯಕಾರಿ ಶೀಟ್ ಗಳ ತೆರವು"