November story (hotstar specials)

ತಮನ್ನಾ ನಟಿಸಿದ ವೆಬ್ ಸರಣಿ – ವಾರಾಂತ್ಯದ ವೀಕ್ಷಣೆ

ವಿಮರ್ಶೆ: ಪ್ರಶಾಂತ್ ಭಟ್

(ಲೇಖಕರು – ವಿಮರ್ಶಕರು)

ಇತ್ತೀಚೆಗೆ ವೆಬ್ ಸರಣಿಗಳು ಐದೇ ಎಪಿಸೋಡಿಗೆ ಇರುವ ಕತೆಯನ್ನು ಹಿಂಜಿ ಏಳೋ ಎಂಟೋ ಎಪಿಸೋಡುಗಳ ಮಾಡಿ ನಮ್ಮ ತಾಳ್ಮೆಯನ್ನು ಪರಿಶೀಲಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿವೆ.
ಈ ಸರಣಿಯೂ ಹಾಗೇ..

ಜಾಹೀರಾತು

ಹಾಟ್ ಸ್ಟಾರ್ ನಲ್ಲಿ ಇದು ಲಭ್ಯ.
ಆಲ್‌ಝೈಮರ್‌‌ ಖಾಯಿಲೆ ಇರುವ ಕ್ರೈಮ್ ಕಾದಂಬರಿಕಾರ, ಅವನ ಮಗಳು. ಅವಳಿಗೆ ತಮ್ಮ ಮನೆಯನ್ನು ಮಾರಬೇಕು ಎಂದು ಆಸೆ. ಅವಳಪ್ಪ ಬಿಡುತ್ತಾ ಇಲ್ಲ. ಇದರ ನಡುವೆ ಇವಳು ಕೆಲಸ ಮಾಡುವ ಪೋಲಿಸ್ ಸ್ಟೇಷನ್ ಅಲ್ಲಿ ಹಳೆಯ ಎಫ್‌.ಐ.ಆರ್‌ಗಳ ಡಿಜಿಟಲೈಸ್ ಮಾಡುವಾಗ ಅನಿರೀಕ್ಷಿತವಾಗಿ ನಡೆಯುವ ಹ್ಯಾಕಿಂಗ್. ಇವರ ಹಳೆಯ ಮನೆಯಲ್ಲಿ ನಡೆಯುವ ಒಂದು ಕೊಲೆ,ಎಲ್ಲೋ ದೂರದ ಹೈದರಾಬಾದ್‌ನಲ್ಲಿ ನಡೆವ ಇನ್ನೊಂದು ಕೊಲೆ ಇವೆಲ್ಲದರ ಸಂಬಂಧ ಏನು? ಇದು ಸ್ಥೂಲವಾಗಿ ಕತೆ.
ಸರಣಿ ನಿಜಕ್ಕೂ ಚೆನ್ನಾಗಿದೆ. ಕತೆ ತೆಗೆದುಕೊಂಡು ಹೋದ ರೀತಿ ‘ ಒರೇ ಕೊಳಪ್ಪಮಾ ಇರುಕ್ಕು’ (ಗೊಂದಲಪೂರ್ಣ) . ಆದರೆ ಅಂತ್ಯದಲ್ಲಿ ಎಲ್ಲಾ ಸಿಕ್ಕುಗಳೂ ಬಿಡಿಸಲ್ಪಡುತ್ತವೆ. ಹಿನ್ನೆಲೆ‌ ಸಂಗೀತ ಪರಿಣಾಮಕಾರಿ. ತಮನ್ನಾ ಸ್ವಲ್ಪ ಗಟ್ಟಿ ಮಾತಾಡಮ್ಮಾ ಅಂತ ಮೊದಲೆರಡು ಎಪಿಸೋಡ್ ಕೂಗುವ ಎಂದಾಗುತ್ತದೆ‌. ಸರಣಿಯಲ್ಲಿ ಜಸ್ಟಿಫಿಕೇಷನ್ ಕೊಡುವ ಆ ಕಾರಣ ಸಕಾರಣವಾ? ದೇವರಿಗೇ ಗೊತ್ತು? ಮಗಳ ಅಪ್ಪನಾಗಿ ನನಗೆ ಅದು ಗಂಟಲಲ್ಲಿ ಕಹಿ ರುಚಿ ಉಳಿಸಿತು. ಯಾವುದೇ ರಾಜಕೀಯದ ಸೋಂಕು ಇಲ್ಲದ ,ಒಂದು ಕಾದಂಬರಿ ಓದಿದ ಹಾಗೆ ಅನಿಸುವ , ನಡು ನಡುವೆ ಎದ್ದು ಹೋದರೂ ಅಯ್ಯೋ ಮಿಸ್ ಆಯ್ತಲ್ಲ ಎಂದು ಅನಿಸದ ಸರಣಿ. ಸ್ವಲ್ಪ ಕ್ರಿಸ್ಪ್ ಆದರೆ ಹದವಾಗಿ ಕರಿದ ವಡೆಯಾಗುತ್ತಿತ್ತು. ಆರಾಮಾಗಿ ನೋಡಬಹುದು. ರೇಟಿಂಗ್ 3.5/5

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "November story (hotstar specials)"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*