ಬಂಟ್ವಾಳ: ಕೊರೊನಾಕ್ಕೆ ಸಂಬಂಧಿಸಿ ಶವಗಳನ್ನು ಆಯಾ ಧರ್ಮದ ಪದ್ಧತಿ ಮೂಲಕ ದಹನ, ದಫನ ಮಾಡುವವರನ್ನೂ ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಲು ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊರೊನಾ ಸಂದರ್ಭ ಹಲವು ಸಾವುಗಳಾಗಿದ್ದು, ಆ ವೇಳೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ಅಂತಿಮ ವಿಧಿ ವಿಧಾನ ನೆರವೇರಿಸಲು ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತವೆ. ಇದಕ್ಕೆ ಸಹಕರಿಸುವ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಬೇಕು. ಕೊರೊನಾ ಸಂದರ್ಭ ಲಸಿಕೆಯನ್ನು ನೀಡುವ ವೇಳೆ ಇವರನ್ನು ಆದ್ಯತೆ ಮೇಲೆ ಪರಿಗಣಿಸಬೇಕು ಎಂದು ಶರೀಫ್ ಆಗ್ರಹಿಸಿದ್ದು, ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.
Be the first to comment on "ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆಸುವವರನ್ನೂ ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ: ಮಹಮ್ಮದ್ ಶರೀಫ್"