


ವಿಟ್ಲ ಪೇಟೆಗೆ ಆಗಮಿಸುವ ಎಲ್ಲ ರಸ್ತೆಗಳನ್ನು ಗುರುವಾರ ಪೊಲೀಸರು ಬಂದ್ ಮಾಡಿ ಪಹರೆ ಕಾಯುತ್ತಿದ್ದು, ಅಗತ್ಯವಿಲ್ಲದೆ ಬರುವವರಿಗೆ ದಂಡ ವಿಧಿಸುತ್ತಿದ್ದಾರೆ. ಪೇಟೆಗೆ ಅನಗತ್ಯವಾಗಿ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗುರುವಾರದಿಂದ ನಾಲ್ಕು ರಸ್ತೆಗಳಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನೋದ್ ರೆಡ್ಡಿ ನೇತೃತ್ವದಲ್ಲಿ ನಾಕಾ ಬಂಧಿ ಮಾಡಲಾಗಿದೆ.
ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ, ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿ ನಾಕಾ ಬಂಧಿ ಮಾಡಲಾಗಿದ್ದು, ಪೊಲೀಸರು ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ವಿಟ್ಲದಲ್ಲಿ ಪೊಲೀಸರ ನಾಕಾಬಂದಿ ಶುರು: ಅನಗತ್ಯ ಸಂಚಾರಿಗಳಿಗೆ ದಂಡ, ಎಚ್ಚರಿಕೆ"