



ಬಂಟ್ವಾಳ: ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ, ಬಿಜೆಪಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ವೆನ್ಲಾಕಿನ ಬ್ಲಡ್ ಬ್ಯಾಂಕ್, ಬಂಟ್ವಾಳ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಶಿಬಿರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಚಾಲನೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬುಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ ಬಜ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ದಂಬೆದಾರ್, ಅಶ್ವಥ್ ರಾವ್ ಬಾಳಿಕೆ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರಮನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ಮಹೇಶ್ ಶೆಟ್ಟಿ, ಕಾರ್ತಿಕ್ ಬಲ್ಲಾಳ್, ಸನತ್ ಕುಮಾರ್ ರೈ ಸಹಿತ ಪಕ್ಷದ ಪ್ರಮುಖರು ಇದ್ದರು.18 ವರ್ಷ ಮೇಲ್ಪಟ್ಟವರಿಗೆ ಕೋ ವ್ಯಾಕ್ಸಿನ್ ದಿನಾಂಕವು ನಿಗದಿಯಾಗಿರುವರಿಂದ ವ್ಯಾಕ್ಸಿನ್ ಹಾಕಿಸಿಕೊಂಡವರು 60 ದಿನ ರಕ್ತದಾನ ಮಾಡುವುದು ನಿಷಿದ್ಧವಾದಕಾರಣ ರಕ್ತದ ಕೊರತೆಯನ್ನು ನೀಗಿಸಲು ಇದೆ ರೀತಿ ಪ್ರತಿ ವಾರದಲ್ಲಿ ಒಂದು ದಿನ ಸರಕಾರಿ ಆಸ್ಪತ್ರೆ ಬಂಟ್ವಾಳದಲ್ಲಿ ರಕ್ತದಾನ ಮಾಡುವ ವ್ಯವಸ್ಥೆ ಇದ್ದು ಕೊರೊನ ಸಮಯದಲ್ಲಿ ರಕ್ತದ ಅಭಾವ ನೀಗಿಸುವ ಈ ಸೇವೆಯಲ್ಲಿ ತಾವೆಲ್ಲರೂ ಕೈ ಜೋಡಿಸಬೇಕಾಗಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ವಿನಂತಿಸಿದ್ದಾರೆ.



Be the first to comment on "ಬಿಜೆಪಿ ಯುವ ಮೋರ್ಚಾದಿಂದ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ"