ತಹಸೀಲ್ದಾರ್ ಅರ್ಚನಾ ಭಟ್ ಅವರು ತುರ್ತು ನಿರ್ವಹಣಾ ದೋಣಿಯಲ್ಲಿ ತೆರಳಿದರು.

ಸಾಮಾಜಿಕ ಕಾರ್ಯಕರ್ತೆ ವಸಂತಿ ಗಂಗಾಧರ್ ಅವರು ಪ್ರಾತ್ಯಕ್ಷಿಕೆಯಲ್ಲಿ ಅಗ್ನಿಶಾಮಕ ಸಿಬಂದಿ ಜೊತೆ ಭಾಗವಹಿಸಿದರು.

ಆರೋಗ್ಯ ಇಲಾಖೆ ವೈದ್ಯರು ಪ್ರಾತ್ಯಕ್ಷಿಕೆ ನೆರವೇರಿಸಿದರು.
ಬಂಟ್ವಾಳ ತಾಲೂಕಾಡಳಿತ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನ ಸಮೀಪ ಹರಿಯುವ ನೇತ್ರಾವತಿ ನದಿಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಲು ವಿಪತ್ತು ನಿರ್ವಹಣೆ ಕುರಿತು ಅಣಕು ಪ್ರದರ್ಶನ ಬುಧವಾರ ಸಂಜೆ ನಡೆಯಿತು.
ಮಂಗಳೂರು ಸಹಾಯಕ ಕಮೀಷನರ್ ಹರ್ಷವರ್ಧನ, ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬ್ಳೆ, ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ಉಪತಹಸೀಲ್ದಾರ್ ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಜನಾರ್ದನ ಜೆ, ಗ್ರಾಮಲೆಕ್ಕಾಧಿಕಾರಿಗಳಾದ ಕರಿಬಸಪ್ಪ ನಾಯ್ಕ್, ಯಶ್ವಿತಾ ಮಂಜುನಾಥ್, ತಾಲೂಕು ವಿಷಯ ನಿರ್ವಾಹಕ ವಿಷುಕುಮಾರ್, ಅಗ್ನಿಶಾಮಕ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬಂದಿ, ಮುಳುಗುತಜ್ಞರು ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು. ಈ ಸಂದರ್ಭ ನದಿಯಲ್ಲಿ ಮುಳುಗಿದವರ ರಕ್ಷಣೆಯ ವಿಧಾನಗಳ ಕುರಿತು ಆರೋಗ್ಯ ಇಲಾಖೆ ವತಿಯಿಂದ ಪ್ರಾತ್ಯಕ್ಷಿಕೆ ನಡೆಯಿತು.
Be the first to comment on "ವಿಪತ್ತು ನಿರ್ವಹಣೆ ಕುರಿತು ಬಂಟ್ವಾಳದಲ್ಲಿ ಅಣಕು ಪ್ರದರ್ಶನ"