ಬಂಟ್ವಾಳ: ಗುರುವಾರ ನಿಧನ ಹೊಂದಿದ ದಲಿತ ಮುಖಂಡ ರಾಜ ಪಲ್ಲಮಜಲು ಅವರಿಗೆ ಸಂತಾಪ ಸೂಚಿಸುವ ಸಭೆ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಸಾಧನಾ ರೆಸಿಡೆನ್ಸಿಯಲ್ಲಿ ಗುರುವಾರ ಸಂಜೆ ಆದಿದ್ರಾವಿಡ ನೌಕರರ ಸಂಘದ ವತಿಯಿಂದ ನಡೆಯಿತು. ಈ ಸಂದರ್ಭ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್ ಮಾತನಾಡಿ, ಸ್ವತಃ ಬಡತನದಲ್ಲಿದ್ದರೂ ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಬಡವರಿಗೆ ದಾರಿದೀಪವಾಗಿದ್ದ ರಾಜಅವರು, ಆದಿದ್ರಾವಿಡ ಸಮಾಜದ ಯುವಕರಿಗೆ ಪ್ರೇರಣಾದಾಯಿಯಾಗಿದ್ದರು ಎಂದರು.ಆದಿದ್ರಾವಿಡ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಹೊನ್ನಪ್ಪ ಕುಂದರ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುಂದೆ ಸಾಗುತ್ತಿದ್ದರು ಎಂದರು. ಪ್ರಮುಖರಾದ ಶ್ರೀನಿವಾಸ ಅರ್ಬಿಗುಡ್ಡೆ, ವೆಂಕಟೇಶ್ ಕೃಷ್ಣಾಪುರ, ಚಂದ್ರಹಾಸ ಅರ್ಬಿಗುಡ್ಡೆ, ಉಮೇಶ್ ಕೃಷ್ಣಾಪುರ, ಸುಶೀಲಾ ಶಿವಕುಮಾರ್ ಮೈರಾನ್ ಪಾದೆ, ಸತೀಶ್ ಕಕ್ಯಪದವು ಮಾತನಾಡಿದರು. ಈ ಸಂದರ್ಭ, ಶಿವಕುಮಾರ್ ಮೈರಾನ್ ಪಾದೆ, ರಮಣಿ ವಿಜಯ್ ಚಂಡ್ತಿಮಾರ್, ಪೂರ್ಣಿಮಾ ಮೈರಾನ್ ಪಾದೆ, ನಾರಾಯಣ ಬಂಗೇರ ಕೃಷ್ಣಾಪುರ, ಸುರೇಶ್ ಅರ್ಭಿಗುಡ್ಡೆ, ಹರೀಶ್ ಕಲ್ಲಾಜೆ ಕಡೇಶಿವಾಲಯ, ನಾರಾಯಣ ಬೊಂಡಾಲ, ಅಭಿಲಾಷ್ ಚಂಡ್ತಿಮಾರ್, ಸಂದೇಶ್ ಅರ್ಬಿಗುಡ್ಡೆ, ರಾಮ ರಾಮಲ್ ಕಟ್ಟೆ, ಜಯಪ್ರಕಾಶ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.
Be the first to comment on "ದಲಿತ ಮುಖಂಡ, ಸಮಾಜಸೇವಕ ರಾಜ ಪಲ್ಲಮಜಲು ಅವರಿಗೆ ಬಿ.ಸಿ.ರೋಡಿನಲ್ಲಿ ಸಂತಾಪ ಸೂಚಕ ಸಭೆ"