ಬಂಟ್ವಾಳ: ಒಡಿಯೂರು ಶ್ರೀಗಳ ಷಷ್ಟ್ಯಬ್ದ ಅಂಗವಾಗಿ ಕಲ್ಲಡ್ಕ ವಲಯ ಸಮಿತಿ ಆಶ್ರಯದಲ್ಲಿ ಸರಣಿ ಕಾರ್ಯಕ್ರಮಗಳು ಅಮ್ಟೂರಿನಲ್ಲಿ ನಡೆದವು. ಒಡಿಯೂರು ಶ್ರೀ ಜನ್ಮ ಷಷ್ಠಬ್ದ ಸಮಿತಿ ಮತ್ತು ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯ ಆಶ್ರಯದಲ್ಲಿ ಅಮ್ಟೂರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬೆಳಗ್ಗೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆಯಲ್ಲಿ ಶ್ರೀ ಮಂತ್ರದೇವತಾ ಸಾನಿಧ್ಯ ಕಟ್ಟೆಮಾರ್ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ದೀಪ ಪ್ರಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಶುಭ ಹಾರೈಸಿದ ಅವರು, ಭಜನೆಯಿಂದ ಮನಸ್ಸಿಗೆ ನೆಮ್ಮದಿಯ ಜೊತೆ, ಸುಖ, ಶಾಂತಿ, ಸಮೃದ್ಧಿಗೂ ಕಾರಣವಾಗುತ್ತದೆ ಎಂದರು.
ಶ್ರೀಕೃಷ್ಣ ಭಜನಾ ಮಂದಿರದ ಸದಸ್ಯರೊಂದಿಗೆ ಭಜನಾ ಸಂಕೀರ್ತನೆ ಆರಂಭಗೊಂಡಿತು. ಈ ಭಜನೆಯ ಪ್ರಾರಂಭವನ್ನುಅನಂತರಾಮ ಐತಾಳ್ ಓಣಿಬೈಲುಇವರು ನಡೆಸಿಕೊಟ್ಟರು.ಶ್ರೀ ಶಾರದಾಂಬಾ ಭಜನಾ ಮಂದಿರ ಕೇಶವ ನಗರ, ಶ್ರೀರಾಮ ಮಂದಿರ ಕಲ್ಲಡ್ಕ, ಶ್ರೀ ಶಾರದಾಂಬಾ ಭಜನಾ ಮಂಡಳಿ ಶೃಂಗಗಿರಿ ಗುಂಡಿಮಜಲು, ಶ್ರೀ ಶಾರದಾ ಭಜನಾ ಮಂದಿರ ವೀರಕಂಭ, ಶ್ರೀಮಹಾಗಣಪತಿ ಭಜನಾ ಮಂಡಳಿ ಬೊಂಡಾಲ, ಶ್ರೀ ನಿಟಿಲಾಕ್ಷ ಸದಾಶಿವ ಭಜನಾ ಮಂಡಳಿ ನೆಟ್ಲ ಹಾಗೂ ಶ್ರೀಕೃಷ್ಣ ಭಜನಾ ಮಂದಿರ ಅಮ್ಟೂರು ಮಂಡಳಿಯ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು.
ಗೌರವ ಅತಿಥಿಗಳಾಗಿ ಒಡಿಯೂರು ಶ್ರೀ ಜನ್ಮ ಷಷ್ಠಬ್ದ ಸಮಿತಿ ಮತ್ತು ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯ ಅಧ್ಯಕ್ಷ ರಾಧಾಕೃಷ್ಣ ಅಡ್ಯಂತಾಯ, ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ವಲಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೊಂಡಾಲ, ಶ್ರೀಕೃಷ್ಣ ಭಜನಾ ಮಂದಿರ ಅಧ್ಯಕ್ಷ ರಮೇಶ್ ಶೆಟ್ಟಿಗಾರ್, ಉಪಾಧ್ಯಕ್ಷ ಬೈದರಡ್ಕ ಪ್ರಭಾಕರ ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಸಂಯೋಜಕಿ ಜಯಲಕ್ಷ್ಮೀ, ಅರ್ಚಕರಾದ ಅನಂತರಾಮ್ ಐತಾಳ್, ಕಲ್ಲಡ್ಕ ವಲಯ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು, ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರಾದ ಆನಂದ ಶೆಟ್ಟಿ, ವೆಂಕಟರಾಯ ಪ್ರಭು, ಪ್ರೇಮ, ಗುರುವಪ್ಪ, ರಾಧಾಕೃಷ್ಣ ಕುಲಾಲ್, ಸಂದೀಪ್ ಶೆಟ್ಟಿ, ಸುರೇಶ್ ಕುಮಾರ್, ಪುರುಷೋತ್ತಮ ಟೈಲರ್, ಹರೀಶ್ ಬಟ್ಟೆಹಿತ್ಲು ವೇಣುಗೋಪಾಲ್ ಶೆಟ್ಟಿಗಾರ್, ರಾಜೇಶ್ ಅಮ್ಟೂರು, ಜಯಪ್ರಕಾಶ ಅಮ್ಟೂರು, ದೇವಕಿ ದಿವಾಕರ ಪೂಜಾರಿ, ನೋಣಯ್ಯ ಪೂಜಾರಿ, ಗೋಪಾಲ್ ವೀರಕಂಬ, ಮತ್ತಿತರರು ಉಪಸ್ಥಿತರಿದ್ದರು
Be the first to comment on "ಅಮ್ಟೂರಿನಲ್ಲಿ ಭಜನಾ ಸಂಕೀರ್ತನೆಗೆ ಚಾಲನೆ"