


ಬಂಟ್ವಾಳ: ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಶಂಭೂರು ಗ್ರಾಮದ ಬೂತಲೆಮಾರು ಎಂಬಲ್ಲಿ ಮುತ್ತಮ್ಮ ಎಂಬವರ ವಾಸದ ಮನೆಗೆ ಹಾನಿಯಾಗಿದೆ. ಇದೇ ಗ್ರಾಮದ ಕರ್ತಪಾಲು ಎಂಬಲ್ಲಿ ಸುಂದರ ಎಂಬವರ ಮನೆ ಜಖಂಗೊಂಡಿದೆ. ಸಜಿಪಮುನ್ನೂರು ಗ್ರಾಮ ದ ಮಡಿವಾಳಪಡಿಪು ಎಂಬಲ್ಲಿ ಮಾಂಕು ಮಡಿವಾಳ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗುತ್ತದೆ. ಸಜಿಪ ಮುನ್ನೂರು ಗ್ರಾಮದ ಮಿತ್ತ ಕಟ್ಟ ಎಂಬಲ್ಲಿ ಲಲಿತ ಎಂಬವರ ಮನೆಗೆ ಸಿಡಿಲು ಬಡಿದಿರುವ ಘಟನೆ ನಡೆದಿದೆ.













Be the first to comment on "ಭಾನುವಾರ ರಾತ್ರಿ ಗಾಳಿ, ಮಳೆ: ಹಲವು ಮನೆಗಳಿಗೆ ಹಾನಿ"