ಬಂಟ್ವಾಳ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಜಾತ್ರೋತ್ಸವಗಳು ಆರಂಭಗೊಂಡಿದ್ದು, ಭಾನುವಾರ ಬ್ರಹ್ಮರಥೋತ್ಸವ ಸಂಭ್ರಮ.
ಮಾ.17ರಂದು ಧ್ವಜಾರೋಹಣ. ಗರುಡೋತ್ಸವ ನಡೆಯಿತು. ಮಾ.18ರಂದು ಹನುಮಂತೋತ್ಸವ, ಶುಕ್ರವಾರ ಮಾ.19ರಂದು ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ, ಭಾಗೀರಥಿ ಅಭಿಷೇಕ, ಕನಕಾಭಿಷೇಕ ನಡೆದವು. ಶನಿವಾರ ಮಾ.20ರಂದು ಜಲಕ್ರೀಡೆ, ಮೃಗಯಾತ್ರೋತ್ಸವ, ಬೆಳ್ಳಿ ರಥೋತ್ಸವ ನಡೆಯಲಿದೆ. 21ರಂದು ಬೆಳಗ್ಗೆ ಗಂಟೆ ೯.೩೦ಕ್ಕೆ ಮೊಕ್ತೇಸರರ, ಹತ್ತು ಸಮಸ್ತರ ಪ್ರಾರ್ಥನೆ, ಮಹಾಪೂಜಾರಂಭ, ಅಭಿಷೇಕಾದಿಗಳು. ಮಧ್ಯಾಹ್ನ ೧ಕ್ಕೆ ಯಜ್ಞಾರಂಭ, ೪.೧೫ಕ್ಕೆ ಯಜ್ಞಾರತಿ, ಪೂರ್ಣಾಹುತಿ, ಬಲಿ. ೫.೩೦ಕ್ಕೆ ಬ್ರಹರಥಾರೋಹಣ, ಸಮಾರಾಧನೆ. ರಾತ್ರಿ ೧ಕ್ಕೆ ಬ್ರಹ್ಮರಥೋತ್ಸವ. ರಾತ್ರಿ ೩.೩೦ಕ್ಕೆ ವಸಂತ ಪೂಜೆ, ಏಕಾಂತ ಸೇವೆ ಇತ್ಯಾದಿ ನಡೆಯಲಿವೆ. ಸೋಮವಾರ ಅವಭೃತೋತ್ಸವ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ದ್ವಾರಪೂಜೆ, ಚೂರ್ಣೋತ್ಸವ, ಮಧ್ಯಾಹ್ನ ೧.೩೦ಕ್ಕೆ ಅವಭೃತೋತ್ಸವ, ನದಿಸ್ನಾನ, ಸಂಜೆ ೬ಕ್ಕೆ ಧ್ವಜಾವರೋಹಣ, ಯಜ್ಞವಿಸರ್ಜನೆ, ಮಹಾಪೂಜೆ, ಸಂಪ್ರೋಕ್ಷಣೆ. ರಾತ್ರಿ ೧೦ಕ್ಕೆ ಮಹಾನೈವೇದ್ಯ, ಮಂಗಳಾರತಿ, ಸಮಾರಾಧನೆ. ೧ಕ್ಕೆ ಸಣ್ಣ ರಥೋತ್ಸವ, ೨ಕ್ಕೆ ಕಲಶದಾನ, ಅಂಕುರಪ್ರಸಾದ ವಿತರಣೆ, ವಸಂತಪೂಜೆ ನಡೆಯುವುದು.
Be the first to comment on "ಬಂಟ್ವಾಳದಲ್ಲಿ ಜಾತ್ರೋತ್ಸವ ಆರಂಭ, ಮಾ.21ರಂದು ಬ್ರಹ್ಮರಥೋತ್ಸವ"