![](https://i0.wp.com/bantwalnews.com/wp-content/uploads/2021/02/WhatsApp-Image-2021-02-25-at-08.26.54.jpeg?resize=336%2C448&ssl=1)
![](https://i0.wp.com/bantwalnews.com/wp-content/uploads/2021/02/BHADRA-1-2.jpeg?resize=336%2C336&ssl=1)
![](https://i0.wp.com/bantwalnews.com/wp-content/uploads/2021/02/WhatsApp-Image-2021-02-27-at-07.55.20.jpeg?resize=640%2C292&ssl=1)
ಬಂಟ್ವಾಳ: ಜೇಸಿಐ ಬಂಟ್ವಾಳದ ವತಿಯಿಂದ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಗೌರವಾಭಿನಂದನೆಯನ್ನು ಬಂಟ್ವಾಳದ ಸಮಾಜಮುಖಿ ಚಿಂತಕ, ಯುವ ಪತ್ರಕರ್ತ ಸಂದೀಪ್ ಸಾಲ್ಯಾನ್ ಅವರಿಗೆ ಅವರ ಸಜೀಪಮೂಡದ ನಿವಾಸ ಅಕ್ಷರದಲ್ಲಿ ನೀಡಲಾಯಿತು.
![](https://i0.wp.com/bantwalnews.com/wp-content/uploads/2021/02/WhatsApp-Image-2021-02-27-at-07.55.20-1.jpeg?resize=595%2C1024&ssl=1)
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಗೌರವರ್ಪಣೆ ಮಾಡಿದರು. ಅವರು ಮಾತನಾಡಿ ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ. ಸಂದೀಪ್ ಸಾಲ್ಯಾನ್ ಸದ್ದಿಲ್ಲದೆ ಇಂತಹ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಅಧ್ಯಕ್ಷತೆ ವಹಿಸಿ ಶುಭಾಶಯ ಕೋರಿದರು. ವಲಯಾಧಿಕಾರಿ ಯತೀಶ್ ಕರ್ಕೆರಾ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಸ್ಥಾಪಕ ಅಧ್ಯಕ್ಷ ನಾಗೇಶ್ ಬಾಳೆಹಿತ್ಲು ವೇದಿಯಲ್ಲಿದ್ದರು.
ಕೋಶಾಧಿಕಾರಿ ರವೀಣ ಕುಲಾಲ್, ಉಪಾಧ್ಯಕ್ಷ ರಾಜೇಂದ್ರ, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಸುವರ್ಣ, ಡಾ. ಬಾಲಕೃಷ್ಣ, ಕಾರ್ಯಕ್ರಮ ಸಂಯೋಜನ ವೆಂಕಟೇಶ್ ಕೃಷ್ಣಾಪುರ,
ಸದಸ್ಯರಾದ ದೀಪಕ್ ಸಾಲ್ಯಾನ್, ಅಕ್ಷಯ್, ಕಿಶೋರ್ ಆಚಾರ್ಯ, ಸುರೇಶ್ ಕುಲಾಲ್, ಜೆಸಿರೆಟ್ ಅಧ್ಯಕ್ಷೆ ವಿದ್ಯಾ ಯು. ಮೂಲ್ಯ, ಸಂದೀಪ್ ಅವರ ಕುಟುಂಬ ಬಂಧುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರೋಷನ್ ರೈ ವಂದಿಸಿದರು
Be the first to comment on "ಜೇಸಿ ಬಂಟ್ವಾಳ ವತಿಯಿಂದ ಪತ್ರಕರ್ತ ಸಂದೀಪ್ ಸಾಲ್ಯಾನ್ ಅವರಿಗೆ ಸನ್ಮಾನ"