ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಸರಪಾಡಿ ಯುವಕ ಮಂಡಲದ ವತಿಯಿಂದ ಒಂದು ತಿಂಗಳ ಕಾಲ ನಡೆಸುವ ೬ನೇ ವರ್ಷದ ನಗರ ಭಜನಾ ಮಹೋತ್ಸವಕ್ಕೆ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.
ಮೊದಲ ದಿನ ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನ ಸೇರಿದಂತೆ ಸರಪಾಡಿ ಬೀದಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆ ಮನೆಗಳಲ್ಲಿ ತೆರಳಿ ಭಜನೆ ನಡೆಸಲಾಯಿತು. ಕಳೆದ ೫ ವರ್ಷಗಳ ನಗರ ಭಜನೆಯಲ್ಲಿ ಸಂಗ್ರಹಗೊಂಡ ಸುಮಾರು ೧೧ ಲಕ್ಷ ರೂ.ಮೊತ್ತವನ್ನು ಈಗಾಗಲೇ ಕ್ಷೇತ್ರಕ್ಕೆ ಹಸ್ತಾಂತರಿಸಲಾಗಿದೆ. ಈ ಭಜನಾ ಕಾರ್ಯವು ಒಂದು ತಿಂಗಳ ಕಾಲ ನಡೆಯಲಿದ್ದು, ಸುಮಾರು ೭೦೦ ಮನೆಗಳನ್ನು ಸಂಪರ್ಕಿಸಲಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಸರಪಾಡಿಯಲ್ಲಿ ನಗರ ಭಜನೆ ಮಹೋತ್ಸವಕ್ಕೆ ಚಾಲನೆ"
Be the first to comment on "ಸರಪಾಡಿಯಲ್ಲಿ ನಗರ ಭಜನೆ ಮಹೋತ್ಸವಕ್ಕೆ ಚಾಲನೆ"