ಬಂಟ್ವಾಳ: ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟ ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಉದ್ಘಾಟನಾ ಸಮಾರಂಭ, ಪದಗ್ರಹಣ ಹಾಗೂ ಕಲಾವಿದರ ಸಮಾವೇಶ ಸೋಮವಾರ ಬಂಟ್ವಾಳ ಕರಾವಳಿ ಕಲೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ಕರಾವಳಿ ಕಲೋತ್ಸವ ವೇದಿಕೆಯಲ್ಲಿ ನಡೆಯಿತು.
ಕಲಾಪೋಷಕ, ಉದ್ಯಮಿ ಟಿ.ರವೀಂದ್ರ ಪೂಜಾರಿ ಉದ್ಘಾಟಿಸಿ ಮಾತನಾಡಿ, ಇದು ಮೊದಲೇ ಆಗಬೇಕಿತ್ತು. ನಾಟಕ ಕಲಾವಿದರು ಒಗ್ಗೂಡುವ ಕಾರ್ಯ ಉತ್ತಮ ಕಾರ್ಯ, ಕಲಾವಿದರ ಸಹಾಯಕ್ಕೆ ಸದಾ ಸಿದ್ಧ ಎಂದರು.
ಉದ್ಯಮಿ ಚಿತ್ತರಂಜನ್ ಶೆಟ್ಟಿ ನುಳಿಯಾಲಗುತ್ತು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್, ಉದ್ಯಮಿ ಪುಷ್ಪರಾಜ್ ಹೆಗ್ಡೆ, ಉದ್ಯಮಿ ಪ್ರೇಮ್ ಶೆಟ್ಟಿ ಸುರತ್ಕಲ್, ಜೆರಾಲ್ಡ್ ಡಿಸಿಲ್ವ ಮಿಯ್ಯಾರು, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ಗೌರವ ಸಲಹೆಗಾರರಾದ ವಿಜಯ ಕುಮಾರ್ ಕೊಡಿಯಾಲಬೈಲ್ , ಸಂಘಟನಾ ಕಾರ್ಯದರ್ಶಿ ಸುಂದರ ರೈ ಮಂದಾರ ಉಪಸ್ಥಿತರಿದ್ದರು.
ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಸ್ವಾಗತಿಸಿದರು. ಸಂಘಟನೆಯ ಉದ್ದೇಶಗಳನ್ನು ವಿವರಿಸಿದ ಸ್ಥಾಪಕ ಸದಸ್ಯ ರಮೇಶ ರೈ ಕುಕ್ಕುವಳ್ಳಿ ಕೊರೊನಾ ಕಾಲದ ನೆರವನ್ನು ವಿವರಿಸಿದರು. ನವೀನ್ ಶೆಟ್ಟಿ ಎಡ್ಡೆಮಾರ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಕರಾವಳಿ ಕರ್ನಾಟಕ ರಂಗಕಲಾವಿದರ ಸೇವಾ ಪರಿಷತ್ತು ಉದ್ಘಾಟನೆ, ಕಲಾವಿದರ ಸಮಾವೇಶ"