ಕರಾವಳಿ ಕಲೋತ್ಸವಕ್ಕೆ ವಿಶೇಷ ಮೆರುಗು ನೀಡಿದ ದಫ್ ತಂಡಗಳು

ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳಇದರ ಜಂಟಿ ಆಶ್ರಯದಲ್ಲಿ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದ ಡಾ ಎಪಿಜೆ ಅಬ್ದುಲ್ ಕಲಾಂ ವೇದಿಕೆಯ ಶನಿವಾರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಇಸ್ಲಾಮಿನ ಸಾಂಸ್ಕೃತಿಕ ಕಲೆಯಾಗಿರುವ ದಫ್ ಕಲಾ ಪ್ರದರ್ಶನ ನಡೆದಿದ್ದು,  ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವನ್ನು ಇರ್ಶಾದ್ ದಾರಿಮಿ ಅಲ್-ಜಝರಿ ಉದ್ಘಾಟಿಸಿದರು. ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ನಂದಾವರ ಮುಖ್ಯ ಭಾಷಣಗೈದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬಂಟ್ವಾಳ ಪುರಸಭಾ ಸದಸ್ಯ ಲುಕ್ಮಾನ್ ಬಿ ಸಿ ರೋಡು,  ದ.ಕ. ಮತ್ತು ಉಡುಪಿ  ಜಿಲ್ಲಾ  ದಫ್  ಎಸೋಸಿಯೇಶನ್  ಉಪಾಧ್ಯಕ್ಷ ಅಬ್ದುಲ್  ರಝಾಕ್ ಕುಕ್ಕಾಜೆ,  ಪ್ರಧಾನ ಕಾರ್ಯದರ್ಶಿ       ಪಿ.ಎಂ.  ಅಶ್ರಫ್  ಪಾಣೆಮಂಗಳೂರು,  ಸದಸ್ಯರಾದ  ಯು  ಮುಸ್ತಫಾ  ಆಲಡ್ಕ, ಆರ್.ಕೆ. ಮದನಿ ಅಮ್ಮೆಂಬಳ, ಕಲೋತ್ಸವ ಸಮಿತಿ  ಅಧ್ಯಕ್ಷ  ಸುದರ್ಶನ್ ಜೈನ್ ಪಂಜಿಕಲ್ಲು, ಗೌರವಾಧ್ಯಕ್ಷ ಪಿ. ಜಯರಾಮ ರೈ, ಚಿಣ್ಣರ ಲೋಕ ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಕೊಟ್ಟಾರಿ,  ಉದ್ಯಮಿ  ಜಗನ್ನಾಥ  ಚೌಟ,  ಕಲೋತ್ಸವ  ಸಮಿತಿ ಗೌರವ  ಸಲಹೆಗಾರರಾದ ಪ್ರಕಾಶ್ ಶೆಟ್ಟಿ, ಶ್ರೀ ಶೈಲ ತುಂಬೆ, ರತ್ನದೇವ ಪೂಂಜಾಲಕಟ್ಟೆ,  ನಿರ್ದೇಶಕ  ಶಿವಪ್ರಸಾದ್ ಬಂಟ್ವಾಳ, ನ್ಯಾಯವಾದಿ ಉಮೇಶ್ ಕುಮಾರ್ ವೈ ಮೊದಲಾದವರು ಭಾಗವಹಿಸಿದ್ದರು.


ಕರಾವಳಿ ದಫ್ ಸ್ಪರ್ಧಾ ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ನಂದಾವರ ಸ್ವಾಗತಿಸಿದರು. ದಫ್ ಎಸ್ಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ದಫ್ ಸ್ಪರ್ಧಾ ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ನಂದಾವರ ಅವರನ್ನು ಕಲೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ದಫ್ ತಂಡಗಳಾದ ಅಲ್ ಅಮೀನ್ ದಫ್ ತಂಡ ಶಿರ್ವ-ಮಂಚಕಲ್, ಖಲಂದರ್ ಷಾ ದಫ್ ತಂಡ ಮಣಿಪುರ-ಕಟಪಾಡಿ, ರಿಫಾಯಿಯಾ ದಫ್ ತಂಡ ಪಂಜಿಮೊಗರು – ಕೂಳೂರು, ಲಜ್‍ನತುಲ್ ಅನ್ಸಾರಿಯಾ ದಫ್ ತಂಡ ಕೃಷ್ಣಾಪುರ, ಖುವ್ವತುಲ್ ಇಸ್ಲಾಂ ದಫ್ ತಂಡಗಳು ಭಾಗವಹಿಸಿದ್ದವು.
 

Be the first to comment on "ಕರಾವಳಿ ಕಲೋತ್ಸವಕ್ಕೆ ವಿಶೇಷ ಮೆರುಗು ನೀಡಿದ ದಫ್ ತಂಡಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*