ಬಂಟ್ವಾಳ: ಬಂಟ್ವಾಳದ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಫೆ.11ರಿಂದ 25ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸ್ಥಾಪಕ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ.
ಈ ಸಂದರ್ಭ ಗೌರವಾಧ್ಯಕ್ಷ ಪಿ.ಜಯರಾಮ ರೈ ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ರಿಯಾಝ್ ಹುಸೇನ್, ಗೌರವ ಸಲಹೆಗಾರರಾದ ಸರಪಾಡಿ ಅಶೋಕ್ ಶೆಟ್ಟಿ, ಪ್ರಕಾಶ್ ಬಿ. ಶೆಟ್ಟಿ ಶ್ರೀಶೈಲ, ಎಚ್ಕೆ ನಯನಾಡು, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮಹಮ್ಮದ್ ನಂದರಬೆಟ್ಟು, ಜಯಾನಂದ ಪೆರಾಜೆ, ರತ್ಮದೇವ ಪುಂಜಾಲಕಟ್ಟೆ, ನಿರ್ದೇಶಕರಾದ ಮಹಮ್ಮದ್ ನಂದಾವರ, ದೇವಪ್ಪ ಕುಲಾಲ್ ಪಂಜಿಕಲ್ಲು, ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರೀ, ಸಂಯೋಜನಾ ಸಮಿತಿಯ ಸೌಮ್ಯ ಭಂಡಾರಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ವಿಶೇಷತೆ: ಈ ಬಾರಿ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಪ್ರವೇಶ ಶುಲ್ಕವಿಲ್ಲ. 15 ದಿನಗಳ ಬೃಹತ್ ಮಟ್ಟದ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ವಿವಿಧ ಮನೋರಂಜನೆಗಳಿವೆ. ಇವಲ್ಲದೆ, ವಸ್ತುಪ್ರದರ್ಶನಗಳು ಇರಲಿವೆ. ಜತೆಗೆ ಕಲಾವಿದರ ಸಮಾವೇಶ, ಕೃಷಿ ಉತ್ಸವ, ನಾಟಕ ಪ್ರದರ್ಶನಗಳು ಇರಲಿವೆ.
ಫೆ.11ರಂದು ಗುರುವಾರ ಸಂಜೆ 4.30ಕ್ಕೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮೈದಾನದವರೆಗೆ ವಿವಿಧ ಕಲಾ ತಂಡಗಳ ಸೇರುವಿಕೆಯಲ್ಲಿ ಜಾನಪದ ದಿಬ್ಬಣದ ಮೆರವಣಿಗೆ ನಡೆಯಲಿದ್ದು, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್ .ಆರ್. ಉದ್ಘಾಟಿಸಲಿರುವರು. ಸಂಜೆ 5.30ಕ್ಕೆ ಕೃಷಿ ಮೇಳ, ಕರಾವಳಿ ಕಲೋತ್ಸವದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೆರವೇರಿಸಲಿರುವರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೇದಿಕೆಯನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಸಚಿವರಾದ ಎಸ್. ಅಂಗಾರ ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿರುವರು. ಮಾಜಿ ಸಚಿವ ಬಿ.ರಮಾನಾಥ ರೈ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಲಿರುವರು. ಮಂಗಳೂರು ಶಾಸಕ ಯು.ಟಿ.ಖಾದರ್ ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಚಿಣ್ಣರ ಲೋಕದ ಸೇವಾ ಸಂಸ್ಥೆಯ ಐಸಿರಿ ಕನ್ನಡ ತುಳು ಆಲ್ಬಂ ಗೀತೆಯ ಬಿಡುಗಡೆ ನಡೆಯಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಿಮ್ಕಾ ದಾಖಲೆಯ ಮುಂಬ ಕಲಾ ಜಗತ್ತು ಸಂಚಾಲಕ, ಚಲನ ಚಿತ್ರ ನಟ, ನಿರ್ಮಾಪಕ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಕರಾವಳಿ ಕಲಾಸೌರಭ ರಾಜ್ಯ ಪ್ರಶಸ್ತಿ ಮತ್ತು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ದಿಯಾ ರಾವ್ ಕುಂಬ್ಳೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 7 ಗಂಟೆಗೆ ಚಿಣ್ಣರ ಲೋಕ ಸೇವಾ ಟ್ರಸ್ಟ್ ಮಂಗಳೂರು,ಪಾಂಡೇಶ್ವರ ಶ್ರೀ ಮುನೇಶ್ವರ ಮಹಾಗಣಪತಿ ದೇವಸ್ಥಾನ ಶಾಖೆಯ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನವಿದೆ.
ಫೆ.12 ರಂದು ಶುಕ್ರವಾರ ಕೃಷಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಬೆಳಗ್ಗೆ 10.30ಕ್ಕೆ ಕೃಷಿ ಸಿರಿ ಕಾರ್ಯಕ್ರಮವನ್ನು ಕುದನೆ ವಾಸುಕಿ ವನ ಧರ್ಮಚಾವಡಿಯ ವರದರಾಜ್ ಅವರು ಉದ್ಘಾಟಿಸುವರು. ರೈತ ಸಂಘ ಸರಪಾಡಿ ವಲಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿರುವರು. ಪ್ರಭಾಕರ ಮಯ್ಯ ನಡ, ಗಣೇಶ್ ಭಟ್ ಎನ್‌ಸಿ.ರೋಡ್, ಡಾ.ನಾಗರಾಜ್, ಜೋ ಪ್ರದೀಪ್ ಡಿಸೋಜ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಮಧ್ಯಾಹ್ನ ಜಾನಪದ ಹಾಡುಗಳು ಬಳಿಕ ಬನಸಿರಿ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಮಹಿಳೆಯರ ಹಾಗೂ ಯುವಕರ ಪಾತ್ರ ವಿಚಾರಗೋಷ್ಠಿ ನಡೆಯಲಿದ್ದು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಅಧ್ಯಕ್ಷತೆ ವಹಿಸುವರು. ಸುಶೀಲಾ, ಮನಮೋಹನ ಪುತ್ತೂರು, ಮನೋರಮ ಭಟ್,ಸುಕನ್ಯಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಸಂಜೆ ಚಿಣ್ಣರ ಲೋಕ ವಿದ್ಯಾರ್ಥಿಗಳಿಂದ ಶ್ರೀ ದುರ್ಗಾ ಪರಮೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಿದೆ.
ಫೆ.13 ರಂದು ತಾಂತ್ರಿಕ ಸಿರಿ, ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಉದ್ಘಾಟಿಸಲಿರುವರು. ಬಂಟ್ವಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರೇಮಾ ಅಧ್ಯಕ್ಷತೆ ವಹಿಸುವರು. ಗಣಪತಿ ಭಟ್, ಗೋವಿಂದ ಪ್ರಸಾದ್, ನಂದನ್ ಶೆಣೈ, ಹರಿದಾಸ್ ಬೆಳ್ತಂಗಡಿ,ರಾಮ ಕಿಶೋರ್ ಮಂಚಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಮಧ್ಯಾಹ್ನ ತುಳು ಪದ ಗೊಂಚಿಲ್ ಬಳಿಕ ವನಸಿರಿ, ಕೃಷಿ ಉದ್ಯಮ ಬಗ್ಗೆ ವಿಚಾರಗೋಷ್ಟಿ ನಡೆಯಲಿದೆ. ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಅವಿನಾಶ್ ಭಟ್, ಡಾ.ಚೇತನಾ, ನಿರಂಜನ ಸೇಮಿತ, ರಾಜೇಂದ್ರ ಕಲ್ಭಾವಿ, ಜೋ ಪ್ರದೀಪ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಸಂಜೆ ೪.೩೦ ಕ್ಕೆ ಕರಾವಳಿ ದಫ್ ಸ್ಪರ್ಧೆ ನಡೆಯಲಿದ್ದು, ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉದ್ಘಾಟಿಸಲಿರುವರು.
ಫೆ.14 ಭಾನುವಾರ ಮಧ್ಯಾಹ್ನ 2 ಗಂಟೆಗೆ ಕರಾವಳಿ ಸಗಮಪ ಸೀಸನ್-೨ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯ ಮೆಗಾ ಆಡಿಷನ್ ನಡೆಯಲಿದ್ದು, ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್ ಉದ್ಘಾಟಿಸುವರು. ಸಂಜೆ ಸಭಾ ಕಾರ್ಯಕ್ರಮದಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸುವರು.
ಫೆ.15 ರಂದು ಸೋಮವಾರ ಸಂಜೆ 4 ಗಂಟೆಗೆ ಕರಾವಳಿ ಡ್ಯಾನ್ಸ್ ಕರಾವಳಿ ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದ್ದು, ಸಾಧನಾ ಸಮೂಹ ಸಂಸ್ಥೆಯ ವಿಶ್ವನಾಥ ಬಂಟ್ವಾಳ ಅವರು ಉದ್ಘಾಟಿಸುವರು. ಸಂಜೆ ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ಉದ್ಯಮಿ ಸುದೀಶ್ ಅಧ್ಯಕ್ಷತೆ ವಹಿಸುವರು.
ಫೆ.16ರಂದು ಮಂಗಳವಾರ ಸಂಜೆ 5 ಗಂಟೆಗೆ ನಾಟಕೋತ್ಸವ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ನಾಗೇಂದ್ರ ಬಾಳಿಗಾ ಉದ್ಘಾಟಿಸುವರು. ಉದ್ಯಮಿ ವರದರಾಜ್ ಪೈ ಮಾವಿನಕಟ್ಟೆ ಅಧ್ಯಕ್ಷತೆ ವಹಿಸುವರು. ಅಂದು ಸತ್ಯ ದೇವತಾ ಕಲಾ ಆರ್ಟ್ಸ್ ಕನಪಾದೆ ತಂಡದಿಂದ ಗೋವಿಂದೆ ಗೊಬ್ಬಯೆ ಸ್ಪರ್ಧಾ ನಾಟಕ ನಡೆಯಲಿದೆ. ಫೆ.17ರಂದು ಬುಧವಾರ ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಯವರಿಂದ ಅರ್ಗಂಟ್, ಫೆ.೧೮. ಗುರುವಾರ ಕಲಾನಿಽ ಕಲಾವಿದರು ನಾವೂರು ಇವರಿಂದ ಬಲಿಪುಗನ, ಫೆ.19 ಶುಕ್ರವಾರ ರಂಗ ಧರಣಿ ಕಲಾವಿದರು ಕಡೆಗೋಳಿ ಅವರಿಂದ ಗುರು, ಫೆ.20 ಶನಿವಾರ ತೆಲಿಕೆದೆ ಕಲಾವಿದೆರ್‌ಕೊಯಿಲ ಅವರಿಂದ ಇನಿಮುಟ್ಟ ಇಂಚಾತಿಜಿ ಸ್ಪರ್ಧಾ ನಾಟಕ ನಡೆಯಲಿದೆ.ಫೆ.21 ರಂದು ರವಿವಾರ ಸಂಜೆ ಕರ್ನಾಟಕ ಸಿಂಗಾರಿ ಮೇಳ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ಚೆಂಡೆ ಕಲಾವಿದರ ಸಮಾವೇಶ, ಚೆಂಡೆ ವಿಚಾರ ಗೋಷ್ಠಿ, ಚೆಂಡೆ ಪ್ರದರ್ಶನ ನಡೆಯಲಿದೆ. ಫೆ.22 ಸೋಮವಾರ ಸಂಜೆ ೪ ಕ್ಕೆ ರಂಗಭೂಮಿ ಕಲಾವಿದರ ಸಮಾವೇಶ ನಡೆಯಲಿದೆ. ಗಂಟೆ 6ರಿಂದ ಮೋಕೆದ ಕಲಾವಿದರಿಂದ ಮೋಕೆಡ್ ಒಂತೆ ಜೋಕೆ ತುಳು ನಾಟಕ ಪ್ರದರ್ಶನವಿದೆ.ಫೆ.23 ರಂದು ಮಂಗಳವಾರ ಸಂಜೆ 3 ಕ್ಕೆ ಕರಾವಳಿ ಸರಿಗಮಪ ಸೀಸನ್ 2 ಇದರ ಸೆಮಿ ಪೈನಲ್ ಮತ್ತು ಫೈನಲ್ ನಡೆಯಲಿದೆ. ಫೆ.24 ರಂದು ಸಂಜೆ ಗಂಟೆ ೫.೩೦ರಿಂದ ರಶೀದ್ ನಂದಾವರ ತಂಡದಿಂದ ಮಾಪುಲೆ ಪಾಟ್ಟ್ , ಗಂಟೆ ೭ ರಿಂದ ತಾಂಡವ ಡ್ಯಾನ್ಸ್ ಸ್ಟುಡಿಯೋ ಅವರಿಂದ ಫಿಲ್ಮ್ ಡ್ಯಾನ್ಸ್ ನಡೆಯಲಿದೆ. ಫೆ.೨೫ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಉತ್ಸವ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪ್ರಶಸ್ತಿ ವಿತರಿಸುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ ಮೋಕೆದ ಕಲಾವಿದರಿಂದ ತೆಲಿಪುವರಾ ಅತ್ತ್ ಬುಲಿಪುವರಾ ತುಳು ನಾಟಕ ಪ್ರದರ್ಶನವಿದೆ ಎಂದವರು ತಿಳಿಸಿದರು.
Be the first to comment on "ಬಂಟ್ವಾಳದಲ್ಲಿ ಫೆ.11ರಿಂದ 25ರವರೆಗೆ ಕೃಷಿ ಉತ್ಸವ, ಕರಾವಳಿ ಕಲೋತ್ಸವ"