ಬಂಟ್ವಾಳ: ವಿದ್ಯೆಯೊಂದಿಗೆ ಮನುಷ್ಯ ಸುಸಂಸ್ಕೃತ ವ್ಯಕ್ತಿಯಾಗಿ ಬದುಕಲು ಬೇಕಾದ ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ. ಆರಾದನಾಲಯಗಳು ಜನರಿಗೆ ಸಂಸ್ಕಾರ, ಸಂಸ್ಕ್ರತಿಯ ಅರಿವು ಮೂಡಿಸುವ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಪ್ರೇರಣೆ ನೀಡಬೇಕಾಗಿದೆ ಎಂದು ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆಯಲ್ಲಿ ಪುನರ್ ನಿರ್ಮಾಣಗೊಳ್ಲುತ್ತಿರುವ ಶ್ರೀ ಮಹಾಮ್ಮಾಯಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆಯಲ್ಲಿ ಆಶ್ರೀರ್ವಚನ ನೀಡಿದರು.
ಕಾರಂಬಡೆ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಊರಿನ ಸಮಸ್ತ ಭಕ್ತಾದಿಗಳ ಆರಾದನಾ ತಾಣವಾಗಿದೆ. ಈ ಕ್ಷೇತ್ರದ ಪುನರ್ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಯಲ್ಲಿ ಸರ್ವಜನತೆ ಒಗ್ಗಟ್ಟಿನಿಂದ ಸೇವೆ ಸಲ್ಲಿಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತು ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ, ಪುರಸಭಾ ಸದಸ್ಯ ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ಕ್ರೆಡಿಟ್ ಕೋ–ಅಪರೇಟಿವ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್, ಉದ್ಯಮಿಗಳಾದ ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಸಂತೋಷ್ ಕುಮಾರ್ ಕೊಟ್ಟಿಂಜ ಮಾತನಾಡಿ ಪುನರ್ ನಿರ್ಮಾಣಕ್ಕೆ ಆರ್ಥಿಕ ನೆರವು ಘೋಷಿಸಿದರು.
ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಜಯಾನಂದ್ ಮಂಗಳೂರು, ಮೋಹನ್ ಗೌಡ, ಸುಂದರ ಪೂಜಾರಿ ಬೋಳಂಗಡಿ, ಸೋಮಪ್ಪ ಕೋಟ್ಯಾನ್ ತುಂಬೆ, ಪುರುಷ ಸಾಲ್ಯಾನ್ ನೆತ್ತರಕೆರೆ, ಭುವನೇಶ್ ಪಚ್ಚಿನಡ್ಕ, ಜಗದೀಶ ಕೊಯಿಲ, ಪ್ರೇಮನಾಥ್ ಕೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಜಯಶಂಕರ್ ಕಾನ್ಸಾಲೆ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಸ್ವಾಗತಿಸಿದರು. ಗೌರವಾಧ್ಯಕ್ಷ ಕೇಶವ ಶಾಂತಿ ಪ್ರಸ್ತಾವಿಕ ಮಾತುಗಳನ್ನಾಡಿದರು. ದಯಾನಂದ ನೇರಂಬೋಳು ವಂದಿಸಿದರು. ಜಯಾನಂದ್ ಬೆಳ್ತಂಗಡಿ ಮತ್ತು ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಶ್ರೀ ಮಹಾಮ್ಮಾಯಿ ಕ್ಷೇತ್ರ ಕಾರಂಬಡೆ: ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ"