ಬಂಟ್ವಾಳ: ಬಂಟ್ವಾಳ ತಾಲೂಕು ಕೇಪು ಗ್ರಾಮದ ಕೇಪು ಹಾಗೂ ವಿಟ್ಲಮುಡ್ನೂರು ಗ್ರಾಮಗಳನ್ನು ಸಂಪರ್ಕಿಸುವ ಒಂದು ಕಿಲೋ ಮೀಟರ್ ಉದ್ದದ ಸಂಪರ್ಕ ರಸ್ತೆಯನ್ನು ಸ್ಥಳೀಯ ಜನರ ಹಾಗೂ ಎನ್ ಎಸ್ ಕ್ರೆಶರ್ ಮಾಲೀಕರ ಸಹಕಾರದೊಂದಿಗೆ ನಿರ್ಮಿಸಲಾಯಿತು.
ಈ ಸಂದರ್ಭ ರಸ್ತೆಗೆ ಖಾಸಗಿ ವರ್ಗ ಜಾಗವನ್ನು ಉದಾರವಾಗಿ ನೀಡಿದ ಮಹಾಲಿಂಗ ಗೌಡ ಆಲಂಗಾರು, ಸ್ಥಳೀಯ ಪ್ರಮುಖರಾದ ಕುಶಾಲಪ್ಪ ಗೌಡ ಆಲಂಗಾರು, ದೇವಪ್ಪ ನಾಯ್ಕ ದೇವುಮೂಲೆ, ಪದ್ಮನಾಭ ಗೌಡ ಅಡ್ಯೇಯಿ, ಕಾಂತಪ್ಪ ಗೌಡ ನುರ್ತಕಲ್ಲು, ಮೋನಪ್ಪ ಬೆಳ್ಚಡ ದೇವುಮೂಲೆ, ಸದಾಶಿವ ಗೌಡ ಆಲಂಗಾರು, ಶೀನ ನಾಯ್ಕ ಸರೋಳಿ, ಶಿವರಾಜ್ ಚೆಕ್ಕುರಿ, ದೇವಪ್ಪ ನಾಯ್ಕ, ಕಂಬಳಿಮೂಲೆ, ಚಂದ್ರಶೇಖರ ನಾಯ್ಕ ಸರೋಳಿ ಮತ್ತು ಶಿವರಾಮ ಗೌಡ ದೇವು ಮೂಲೆ ಇದ್ದರು. ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುವುದು, ಇದರಿಂದಾಗಿ ಚುನಾವಣೆಗೆ ಬಹಿಷ್ಕಾರ ಹಾಕುವುದು ಇಂಥ ವರದಿಗಳು ಮಾಹಿತಿಗಳು ಹರಿದಾಡುತ್ತಿರುವ ಹೊತ್ತಿನಲ್ಲೇ ಸಾರ್ವಜನಿಕರೇ ರಸ್ತೆ ನಿರ್ಮಿಸಿದ ವಿಚಾರವೊಂದು ಗಮನ ಸೆಳೆಯುತ್ತಿದೆ.
Be the first to comment on "ಕೇಪು ವಿಟ್ಲಮುಡ್ನೂರು ಭಾಗದ 1 ಕಿ.ಮೀ. ರಸ್ತೆಯನ್ನು ಸ್ಥಳೀಯರೇ ನಿರ್ಮಿಸಿದರು"