ಸಾಲೆತ್ತೂರು: ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ವಾರ್ಷಿಕ ಮಹಾಸಭೆ ಪಂಜರಕೋಡಿ ನೂರುಲ್ ಉಲೂಂ ಮದ್ರಸದಲ್ಲಿ ನಡೆಯಿತು. ಪಂಜರಕೋಡಿ ಖತೀಬ್ ಅಬೂಬಕ್ಕರ್ ಮದನಿ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಶಾಖಾಧ್ಯಕ್ಷ ರಫೀಕ್ ಮಿತ್ತರಾಜೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ನಝೀರ್ ಮಿತ್ತರಾಜೆ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮಸೂದ್ ರವರು ವರದಿ ಹಾಗೂ ಲೆಕ್ಕ ಪತ್ರ ವಾಚಿಸಿದರು. ಸೆಕ್ಟರ್ ವೀಕ್ಷಕರಾಗಿ ಎಸ್ಸೆಸ್ಸಫ್ ಮಂಚಿ ಸೆಕ್ಟರ್ ಅಧ್ಯಕ್ಷರಾದ ಝಬೈರ್ ಸಂಪಿಲ ,ಫರ್ವಾಝ್ ಮಂಚಿ, ತಮೀಮ್ ಕಟ್ಟತ್ತಿಲ ಆಗಮಿಸಿದ್ದರು.
ನೂತನ ಅಧ್ಯಕ್ಷರಾಗಿ ನಝೀರ್ ಮಿತ್ತರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಸೂದ್ ಕೆ.ಯು, ಕೋಶಾಧಿಕಾರಿಯಾಗಿ ಯೂಸುಫ್ ಮಿತ್ತರಾಜೆ. ಉಪಾಧ್ಯಕ್ಷರುಗಳಾಗಿ ಯಝೀದ್ ಕಲ್ಲಕಟ್ಟ ಮತ್ತುಜಲೀಲ್ ಕೆ ಕಾರ್ಯದರ್ಶಿಗಳಾಗಿ ನಾಸಿರ್ ಮಿತ್ತರಾಜೆ, ಮಜೀದ್ ಮಿತ್ತರಾಜೆ, ಫೈಝಲ್ ಮಿತ್ತರಾಜೆ, ಅಲ್ತಾಫ್ ಪಂಜರಕೋಡಿ, ಖಳೀಲ್ ಬಿ.ಎಲ್, ರಹೀಂ ಮಿತ್ತರಾಜೆ ಹಾಗೂ 11 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
Be the first to comment on "ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆ ಮಹಾಸಭೆ, ನೂತನ ಸಮಿತಿ ಅಸ್ತಿತ್ವಕ್ಕೆ"