




ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆ ಡಿ.22ರಂದು ಬಂಟ್ವಾಳ ತಾಲೂಕಿನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳಿಗೆ 2552 ನಾಮಪತ್ರಗಳು ಶುಕ್ರವಾರದೊಳಗೆ ಸಲ್ಲಿಕೆಯಾಗಿದ್ದವು. ಶನಿವಾರ ಪರಿಶೀಲನಾ ಕಾರ್ಯ ನಡೆದಿದ್ದು, 2480 ನಾಮಪತ್ರಗಳು ಸ್ವೀಕೃತಗೊಂಡಿವೆ. 72 ನಾಮಪತ್ರಗಳು ಮಾರ್ಗಸೂಚಿಯನ್ನು ಪಾಲಿಸದೇ ಸಲ್ಲಿಸಿದ ಕಾರಣ ತಿರಸ್ಕೃತಗೊಂಡಿವೆ. ಸೋಮವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನವಾಗಿದೆ. 26 ಸ್ಥಾನಗಳ ನರಿಕೊಂಬುವಿನಲ್ಲಿ 91 ನಾಮಪತ್ರಗಳು ಸ್ವೀಕೃತಗೊಂಡರೆ, 24 ಸ್ಥಾನಗಳ ಗೋಳ್ತಮಜಲಿನಲ್ಲಿ 82 ನಾಮಪತ್ರಗಳು ಸ್ವೀಕೃತಗೊಂಡಿವೆ. ಸಜೀಪಮುನ್ನೂರು 23 ಸ್ಥಾನ, 70 ನಾಮಪತ್ರ, ಸಜಿಪಮೂಡ 20 ಸ್ಥಾನ 66 ನಾಮಪತ್ರ, ಸಜಿಪನಡು 15 ಸ್ಥಾನಕ್ಕೆ 57 ನಾಮಪತ್ರಗಳು ಸಲ್ಲಿಕೆಯಾದದ್ದು ಸ್ವೀಕೃತಗೊಂಡಿವೆ. ಚೆನ್ನೈತೋಡಿ 20 ಸ್ಥಾನಗಳಿಗೆ 52, ಪಿಲಾತಬೆಟ್ಟಿನ 9 ಸ್ಥಾನಗಳಿಗೆ 23 ನಾಮಪತ್ರಗಳು ಸ್ವೀಕೃತಗೊಂಡರೆ, 29 ಸ್ಥಾನಗಳ ಬಾಳೆಪುಣಿಗೆ 84, 21 ಸ್ಥಾನಗಳ ಮಂಚಿಗೆ 65, 19 ಸ್ಥಾನಗಳ ಇಡ್ಕಿದು ಗ್ರಾಪಂಗೆ 52 ನಾಮಪತ್ರಗಳು ಸ್ವೀಕೃತವಾಗಿವೆ. 31 ಸ್ಥಾನಗಳಿರುವ ಕೊಳ್ನಾಡು ಗ್ರಾಪಂಗೆ 103 ನಾಮಪತ್ರಗಳು ಸ್ವೀಕೃತವಾಗಿವೆ. 16 ಸ್ಥಾನಗಳ ಕರೋಪಾಡಿಗೆ 61, 20 ಸ್ಥಾನಗಳ ಕನ್ಯಾನಕ್ಕೆ 95, 20 ಸ್ಥಾನಗಳ ಪುಣಚಕ್ಕೆ 69 ನಾಮಪತ್ರಗಳು ಸ್ವೀಕೃತಗೊಂಡಿವೆ.

Be the first to comment on "ಗ್ರಾಪಂ ಚುನಾವಣೆ: ಬಂಟ್ವಾಳದಲ್ಲಿ 2480 ನಾಮಪತ್ರ ಸ್ವೀಕೃತ"