ಬಂಟ್ವಾಳ: ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಹಿರಿಯ ವಕೀಲ ನಂದಕಿಶೋರ್, ಸಂವಿಧಾನ ತಿದ್ದುಪಡಿಗಳು ಹಾಗೂ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುವ ಕಾನೂನುಗಳ ಕುರಿತು ವಿಷಯ ಮಂಡಿಸಿದರು. ಈ ಸಂದರ್ಭ ಮಾತನಾಡಿದ ಪರಿಷತ್ತಿನ ದ.ಕ.ಜಿಲ್ಲಾ ಜತೆಕಾರ್ಯದರ್ಶಿ ಅರುಣ್ ರೋಶನ್ ಡಿಸೋಜ, ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಅಧ್ಯಕ್ಷತೆಯನ್ನು ಅ.ಭಾ.ಅ.ಪ.ದ ಬಂಟ್ವಾಳ ಗೌರವಾಧ್ಯಕ್ಷ ರಾಜಾರಾಮ ನಾಯಕ್ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ರಮ್ಯಾ ಎಚ್ ಆರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಶಿಲ್ಪಾ ಜಿ. ತಿಮ್ಮಾಪುರ, ಬಂಟ್ವಾಳ ಘಟಕದ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಉಪಾಧ್ಯಕ್ಷರಾದ ಉಮಾ ಎನ್. ಸೋಮಯಾಜಿ, ಗಿರೀಶ್ ಮುಳಿಯಾಲ, ಸಂತೋಷ್ ಜೀವನ್ ಲೋಬೊ, ಖಜಾಂಚಿ ಪ್ರಶಾಂತ್ ಕೆ, ಜತೆ ಕಾರ್ಯದರ್ಶಿ ಶುಭಲತ ಉಪಸ್ಥಿತರಿದ್ದರು. ನ್ಯಾಯವಾದಿ ಆಶಾ ಸ್ವಾಗತಿಸಿದರು. ಶೈಲಜಾ ರಾಜೇಶ್ ಪ್ರಾರ್ಥಿಸಿದರು. ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ಧಕಟ್ಟೆ ವಂದಿಸಿದರು.
Be the first to comment on "ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ನಿಂದ ಸಂವಿಧಾನ ದಿನಾಚರಣೆ"