ಬಂಟ್ವಾಳ: ಪೊಳಲಿ ಶ್ರೀ ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ವತಿಯಿಂದ ಪಂಚಮವರ್ಷದ 72 ಗಂಟೆಗಳ ಆಹೋರಾತ್ರಿ ಏಕಾಹ ಭಜನಾ ಮಹೋತ್ಸವವು ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಡಿ.12-15 ರ ಸೂರ್ಯೋದಯದ ವರೆಗೆ ನಡೆಯಲಿದೆ ಎಂದು ಭಜನಾ ಮಂಡಳಿಯ ಯಶೋಧರ ಅಡ್ಡೂರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಡಿ.12 ರಂದು ಸೂರ್ಯೋದಯ ಸಮಯದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪಪ್ರಜ್ವಲನೆಗೈದು ಭಜನಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.15 ರಂದು ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ. ವಿವಿಧೆಡೆಯ ಸುಮಾರು 38 ಭಜನಾ ತಂಡಗಳು ಈ ಭಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದ ಅವರು ಡಿ.10ರಂದು ಸಂಜೆ ಪೊಳಲಿ ದೇವಸ್ಥಾನದಿಂದ ಶ್ರೀ ಅಖಿಲೇಶ್ವರ ದೇವಸ್ಥಾನದ ವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಈ ಭಜನಾ ಮಹೋತ್ಸವದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಣಿಲ ಶ್ರೀ ಮೋಹನದಾಸ ಸ್ವಮೀಜಿ, ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದಲ್ಲಿ ಭಜನಾ ಸಮಾವೇಶ ಸಂಪನ್ನಗೊಳ್ಳಲಿದೆ. ಭಜನಾಮಹೋತ್ಸವದ ಕೊನೆಗೆ ಆನಂದ ಭಜನೆಯು ನಡೆಯುವುದು. ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಭಜನಾಮಹೋತ್ಸವ ನಡೆಸಲಾಗುತ್ತಿದೆ ಎಂದರು.ಭಜನಾ ಮಂಡಳಿಯ ಪದಾಧಿಕಾರಿಗಳಾದ ಹರೀಶ್ ಎಸ್.ಮಣಿಕಂಠಪುರ, ಸುಮನ್ ರಾಜ್ ಪೊಳಲಿ, ಮುರಳಿ ಪೊಳಲಿ ಉಪಸ್ಥಿತರಿದ್ದರು.
Be the first to comment on "ಪೊಳಲಿ ಶ್ರೀ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ವತಿಯಿಂದ 72 ಗಂಟೆಗಳ ಕಾಲ ಅಹೋರಾತ್ರಿ ಏಕಾಹ ಭಜನೆ"