ಬಂಟ್ವಾಳ: ಸುಮಂಗಲಾ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ನಿಯಮಿತದ ಬಂಟ್ವಾಳ ಶಾಖೆ ಜಕ್ರಿಬೆಟ್ಟುವಿನಲ್ಲಿರುವ ಗೋವಿಂದ ರೆಸಿಡೆನ್ಸಿ ಕಟ್ಟಡಕ್ಕೆ ಸೋಮವಾರ ವಿಧ್ಯುಕ್ತವಾಗಿ ಸ್ಥಳಾಂತರಗೊಂಡಿತು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಶ್ರೀ ಕನಪಾಡಿ ದೈವಸ್ಥಾನದ ಆಡಳಿತ ಮೊಕ್ತೇಸರ ರಾಜಶೇಖರ ರೈ, ಬಂಟ್ವಾಳ ತಾಲೂಕು ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ರಘು ಸಪಲ್ಯ, ವರ್ತಕರ ವಿವಿಧೋದ್ದೇಶ ಸಹಕಾರಿ ನಿಯಮಿತದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಕಟ್ಟಡದ ಮಾಲೀಕರಾದ ಸುಲೋಚನಾ, ಜಯಪ್ರಕಾಶ್ ಬಂಟ್ವಾಳ, ಎಸ್.ವಿ.ಎಸ್.ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಶಿವರಾಯ ಕಾಮತ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸಚಿನ್ ಮೆಲ್ಕಾರ್, ಪ್ರಮುಖರಾದ ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಮಂಗಲಾ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ನಿಯಮಿತದ ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ಮುಖ್ಯ ಕಾರ್ಯನಿರ್ವಾಹಕ ವಸಂತ ಪಿ, ನಿರ್ದೇಶಕರಾದ ಕೃಷ್ಣಪ್ಪ ಗಾಣಿಗ ಮಾಣಿಮಜಲು, ಸದಾಶಿವ ಪುತ್ರನ್ ಜಕ್ರಿಬೆಟ್ಟು, ದಾಮೋದರ ಸಪಲ್ಯ ನರಿಕೊಂಬು, ಈಶ್ವರ ಮೆಲ್ಕಾರ್ , ರವೀಂದ್ರ ಸಪಲ್ಯ ಬೋಳಂತೂರು, ಸಂದೀಪ್ ಕುಮಾರ್. ಹೆಚ್ ಮಾರ್ನಬೈಲ್, ಶರತ್ ಹೆಚ್ ನರಿಕೊಂಬು, ರವೀಂದ್ರ ಸಫಲ್ಯ ಬೋಳಂತೂರು, ಸಂದೀಪ್ ಕುಮಾರ್ ಎಚ್. ಮಾರ್ನಬೈಲ್, ಶರತ್ ಎಚ್. ನರಿಕೊಂಬು, ಯಶೋಧಾ ಬಿ.ಕೆ. ಶಂಭೂರು, ಬಬಿತಾ ಸಚಿನ್ ಮೇಲ್ಕಾರ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ನಿಯಮಿತದ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಸ್ವಾಗತಿಸಿ, ವಂದಿಸಿದರು. ವೇ.ಮೂ. ಕೃಷ್ಣರಾಜ್ ಭಟ್ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು.
Be the first to comment on "ಸುಮಂಗಲಾ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಶಾಖೆ ಸ್ಥಳಾಂತರ"