







ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸಕಾಲ ಸಪ್ತಾಹ ಆರಂಭಗೊಂಡಿದೆ. ಡಿಸೆಂಬರ್ 5ರವರೆಗೆ ಈ ಕಾರ್ಯಕ್ರಮ ಇರಲಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇ-ಆಡಳಿತದನ್ವಯ ನಾಗರಿಕರಿಗೆ ಸೇವೆ ಪಡೆದುಕೊಳ್ಳಲು ತಮ್ಮ ಹಕ್ಕುಗಳನ್ನು ಚಲಾಯಿಸುವ ಅಧಿಕಾರವುಳ್ಳ ಸಕಾಲ ಯೋಜನೆಯಡಿ 98 ಇಲಾಖೆಗಳು ಬರುತ್ತವೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಮಿನಿ ವಿಧಾನಸೌಧ, ನಾಡಕಚೇರಿ ಪಾಣೆಮಂಗಳೂರು ಮತ್ತು ನಾಡಕಚೇರಿ ವಿಟ್ಲ ಸಹಯೋಗದಲ್ಲಿ ಸಕಾಲ ಸಹ್ತಾಹ ನಡೆಯುತ್ತಿದೆ. ಇದರನ್ವಯ ಕಚೇರಿಯ ಆವರಣದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಕಾರ್ಯ ನಡೆಯಿತು.

Be the first to comment on "ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸಕಾಲ ಸಪ್ತಾಹ ಆರಂಭ"