ಬಂಟ್ವಾಳ: ತಾಲೂಕಿನ ರಾಯಿ ಎಂಬಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ನೋಂದಣಿ ಕಾರ್ಯಕ್ರಮ ನಡೆಯಿತು. ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಗ್ರಾಮ ಪಂಚಾಯಿತಿ ರಾಯಿ, ಹಿಂದೂ ಧರ್ಮೋತ್ಥಾನ ವೇದಿಕೆ, ಹಾಲು ಉತ್ಪಾದಕರ ಸಹಕಾರಿ ಸಂಘ ರಾಯಿ,ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಲಿ ರಾಯಿ, ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಬದನಡಿ, ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ರಾಯಿ, ಆಶ್ರಯದಲ್ಲಿ ರಾಯಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ನೊಂದಾವಣೆ ಕಾರ್ಯಕ್ರಮವನ್ನು ದಿನೇಶ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು .
ಅಧ್ಯಕ್ಷತೆಯನ್ನು ಸಹಾಯಕ ಅಂಚೆ ಅಧೀಕ್ಷಕ ಧನಂಜಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಸಂತ ಕುಮಾರ್ ಅಣ್ಣಳಿಕೆ, ಪದ್ಮನಾಭ ಗೌಡ, ಚಂದ್ರಶೇಖರ ಗೌಡ, ರಾಜೇಶ್ ಜೈನ್ ಪೆಡುರಾಯಿಬೀಡು, ದಿನೇಶ್ ಕುದ್ಕೋಳಿ, ದಯಾನಂದ ಸಪಲ್ಯ. ಪಿಡಿಒ ಮಧು ಟಿ ಎಲ್, ವಾಣಿಶ್ರೀ, ಗುರುಪ್ರಸಾದ್ ಹಾಜರಿದ್ದರು. ಹರೀಶ ಆಚಾರ್ಯ ರಾಯಿ ಕಾರ್ಯಕ್ರಮ ನಿರೂಪಿಸಿದರು.ಚಂದ್ರಶೇಖರ ಗೌಡ ಮತ್ತಾವು ವಂದಿಸಿದರು.
Be the first to comment on "ರಾಯಿ: ಆಧಾರ್ ಕಾರ್ಡ್ ತಿದ್ದುಪಡಿ, ನೋಂದಣಿ ಕಾರ್ಯಕ್ರಮ"