ಎಸ್.ಡಿ.ಪಿ.ಐ. ಬೆಂಬಲಿತರ ಆಡಳಿತದಲ್ಲಿ ಮಾದರಿ ಗ್ರಾಮವಾದ ಸಜಿಪನಡು: ಅಭಿವೃದ್ಧಿ ವರದಿ ಕೈಪಿಡಿ ಬಿಡುಗಡೆಯಲ್ಲಿ ಪಕ್ಷ ಪ್ರಮುಖರು

ಜಾಹೀರಾತು

ಬಂಟ್ವಾಳ: ಸಜಿಪನಡು ಗ್ರಾಮ ಪಂಚಾಯತ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೆಂಬಲಿತ ಐದು ವರ್ಷ ಅಧಿಕಾರದಲ್ಲಿ ರಾಜ್ಯಮಟ್ಟದಲ್ಲಿ ಮಾದರಿ ಗ್ರಾಮವಾಗಿ ಕಾರ್ಯನಿರ್ವಹಿಸಿ ಉತ್ತಮ ಅಧಿಕಾರವನ್ನು ನೀಡಿದೆ. ಅಂದಾಜು  1.25 ಕೋಟಿ ಅನುದಾನ ಹಾಗು ಉಧ್ಯೋಗ ಖಾತರಿ ಯೋಜನೆಯಲ್ಲಿ ಅಂದಾಜು ಒಂದು ಕೋಟಿಯಷ್ಟು ಖರ್ಚು ಮಾಡಿ ಅಭಿವೃದ್ಧಿ ಸಾದಿಸಿದೆ ಎಂದು ಗ್ರಾಪಂನ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ನಾಸಿರ್ ಸಜಿಪ ಮತ್ತು ಎಸ್. ಡಿ. ಪಿ. ಐ ದ.ಕ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಹೇಳಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ  ಎಸ್.ಡಿ.ಪಿ.ಐ. ವತಿಯತಿಂದ ಸಜಿಪನಡು ಗ್ರಾಪಂನಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳ ವರದಿಯ ಬುಲೆಟಿನ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,  ಸಜಿಪನಡು ಗ್ರಾಮದಲ್ಲಿ ಮೂಲಭೂತ ಸೌಕರ್ಯವನ್ನು ಜನ ಮೆಚ್ಚುವಂತೆ ಮಾಡಿ ಹಾಗು ಇನ್ನಿತರ ಅಭಿವೃದ್ಧಿಯಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿರುತ್ತದೆ. ನೀರು, ದಾರಿದೀಪ, ರಸ್ತೆ, ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ ಜನರ ಆಶೋತ್ತರಗಳಿಗೆ ಐದು ವರ್ಷದ ಅವಧಿಯಲ್ಲಿ ಸಮಗ್ರವಾಗಿ ಸ್ಪಂದಿಸಿದೆ ಎಂದರು.

ಅಧಿಕಾರ ಸ್ವೀಕರಿಸಿದ ಒಂದು ವರ್ಷದ ಅವಧಿಯಲ್ಲಿ ಗ್ರಾಮೋತ್ಸವ ಎಂಬ ಕಾರ್ಯಕ್ರಮವನ್ನು ಮಾಡಿ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಮೋತ್ಸವದಲ್ಲಿ ಮಕ್ಕಳ ಉಚಿತ ವೈದೈಕೀಯ ತಪಾಸನ ಶಿಭಿರ, ಹಿಜಾಮ ಚಿಕಿತ್ಸೆ, ಸ್ವಚ್ಚತಾ ಆಂದೋಲನ, ಕವಿಗೋಷ್ಟಿ ಮುಂತಾದ ಕಾರ್ಯಕ್ರಮವನ್ನು ಮಾಡಿರುತ್ತದೆ. ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಘಟಕದ ವಿರುದ್ದ ಎಸ್.ಡಿ.ಪಿ.ಐ ಹತ್ತು ವರ್ಷದಿಂದ ಹೋರಾಟ ಮಾಡಿ, ಇದೇ ಅವಧಿಯಲ್ಲಿ  ಈ ಸಮಸ್ಯೆಗೆ ಪರಿಹಾರ ಒದಗಿದೆ, ಸಜಿಪನಡು ಗ್ರಾಮದಲ್ಲಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಒಂದೇ ಪ್ರದೇಶದಲ್ಲಿ ವ್ಯವಸ್ಥೆಮಾಡಿ ಆಕರ್ಷಣೆಯ ಸಜಿಪ ಒನ್-2020 ಎಂಬ ವ್ಯವಸ್ಥೆಯನ್ನು ತಂದಿದೆ ಎಂದರು.

ಗ್ರಾಮ ಪಂಚಾಯತ್ ಅಭಿವೃದ್ದಿಯಿಂದ ಪ್ರೇರೇಪಣೆಯಾಗಿ ಶಾಸಕರ ನಿಧಿಯಲ್ಲಿ ಇದುವರೆಗು ಆಗದಂಥ ಅಭಿವೃದ್ದಿ ಆಗಿರುವುದು ಗ್ರಾಮ ಪಂಚಾಯತ್‍ನ 5 ವರ್ಷದ ಅಧಿಕಾರಕ್ಕೆ ಅಭಿಮಾನವಾಗಿದೆ. ಜಿಲ್ಲಾ ಪಂಚಾಯತ್ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನವೂ ಈ ಅವಧಿಯಲ್ಲಿ ಲಭ್ಯವಾಗಿದೆ.

ಪಕ್ಷದ ಸಹಕಾರ: ಎಸ್.ಡಿ.ಪಿ.ಐ ವತಿಯಿಂದ ಅನುದಾನಗಳು ಲಭ್ಯವಾಗಿದ್ದು ಗ್ರಾಮದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಎಸ್.ಡಿ.ಪಿ.ಐ ಪಕ್ಷದ ಸಹಕಾರದಿಂದ  ಉಚಿತ ಮಾಹಿತಿ ಮತ್ತು ಸೆವಾ ಕೆಂದ್ರ, ಬಸ್ ನಿಲ್ದಾಣ, ಹಲವು ಬೋರ್ವೆಲ್ ವ್ಯವಸ್ಥೆ ಇದೆಲ್ಲವು ಎಸ್. ಡಿ. ಪಿ. ಐ ಪಕ್ಷದ ಕೊಡುಗೆಯಾಗಿದೆ. ರಾಜ್ಯಮಟ್ಟದಲ್ಲಿಯೇ ಹೆಸರು ಪಡೆದಂತಹ ಹಿಂದು ರುದ್ರಭೂಮಿಯು ಇದೇ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿರುವುದು 5 ವರ್ಷದ ಅಭಿವೃದ್ಧಿಗೆ ಕನ್ನಡಿಯಾಗಿದೆ ಎಂದು ವಿವರಿಸಿದರು, ಸಜಿಪನಡು ಗ್ರಾಮ ಚುನಾವಣಾ ಸಮಿತಿ ಅಧ್ಯಕ್ಷ ಎಸ್ . ಎನ್ ಅಬ್ದುಲ್ ರಹಿಮಾನ್, ಎಸ್.ಡಿ.ಪಿ.ಐ ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಸಜಿಪ, ಸಜಿಪನಡು ಪಿ.ಎಫ್.ಐ ಅಧ್ಯಕ್ಷ ನೌಷಾದ್, ಇಕ್ಬಾಲ್ ಬೈಲಗುತ್ತು,  ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಎಸ್.ಡಿ.ಪಿ.ಐ. ಬೆಂಬಲಿತರ ಆಡಳಿತದಲ್ಲಿ ಮಾದರಿ ಗ್ರಾಮವಾದ ಸಜಿಪನಡು: ಅಭಿವೃದ್ಧಿ ವರದಿ ಕೈಪಿಡಿ ಬಿಡುಗಡೆಯಲ್ಲಿ ಪಕ್ಷ ಪ್ರಮುಖರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*