ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರದ ಅಂಗವಾಗಿ ಅಕ್ಟೋಬರ್ 21ರ ಬುಧವಾರದಂದು ಬೆಳಗ್ಗೆ 9 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಶಿಲಾಮಯ ಶ್ರೀ ಶಕ್ತಿ ಮಹಾಗಣಪತಿ ದೇವರ ಗರ್ಭಗುಡಿಯ ಹಾಗೂ ಸುತ್ತು ಪೌಳಿಗೆ ಶಿಲಾನ್ಯಾಸ ಕಾರ್ಯಕ್ರಮ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕೆ ಪ್ರಭಾಕರ ಭಟ್, ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ದ.ಕ. ಜಿ ಪಂ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ತಾಲೂಕು ಪಂಚಾಯಿತಿ ಸದಸ್ಯ ಸವಿತಾ ಹೇಮಂತ ಕರ್ಕೇರ, ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಸಜಿಪಗುತ್ತು, ವಿವೇಕ್ ಶೆಟ್ಟಿ ನಗ್ರಿಗುತ್ತು, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ ಜಿ ರಾಜಾರಾಮ ಭಟ್, ಉದ್ಯಮಿ ರವೀಂದ್ರ ಭಂಡಾರಿ ಪುಣ್ಕೆಮಜಲ್, ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರು, ಯತೀಶ ಭಂಡಾರಿ, ಮಂಜಪ್ಪ, ಶ್ರೀಕಾಂತ್ ಶೆಟ್ಟಿ ಸಂಕೇಶ, ಜಿತೇಂದ್ರ ಕುಮಾರ್ ದೇರಾಜೆಗುತ್ತು, ಗಣೇಶ ಸೋಮಯಾಜಿ ಜಯಶಂಕರ ಬಾಸ್ರಿತ್ತಾಯ, ಸದಾಶಿವ ಶೆಟ್ಟಿ, ಬೇಬಿ ಅರಸ, ಎಸ್ ಎಂ ಗೋಪಾಲಕೃಷ್ಣ ಆಚಾರ್ಯ, ಐತಪ್ಪ ಆಳ್ವ, ಸುಜೀರ್ಗುತ್ತು, ಗಣೇಶ್, ಷ್ಣು ಪ್ರಸಾದ್ ಹೆಗ್ಡೆ ಮೊದಲಾದವರು ಭಾಗವಹಿಸಲಿದ್ದಾರೆ
Be the first to comment on "ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 21ರಂದು ಶಿಲಾನ್ಯಾಸ"