ಬಂಟ್ವಾಳ: ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಬಂಟ್ವಾಳ ಬಿ.ಸಿ.ರೋಡಿನ ಸಂಚಯಗಿರಿ ನಿವಾಸಿ ಡಾ. ಆಶಾಲತಾ ಎಸ್ ಸುವರ್ಣ ಮತ್ತು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ನ ಉಪನ್ಯಾಸಕಿ ಹರಿಣಾಕ್ಷಿ ಬರೆದ ಆಧುನಿಕ ಬ್ಯಾಂಕ್ ನಿರ್ವಹಣೆ ಪಠ್ಯಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ ಪಿ. ಎಸ್ ಯಡಪಡಿತ್ತಾಯ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಉಪಕುಲಪತಿಗಳ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕದ ಲೇಖಕರು ಮತ್ತು ಹಿರಿಯ ಸಹ ಪ್ರಾಧ್ಯಾಪಕರಾದ ಡಾ.ಉಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು. ಈ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಯಲಯದ ದ್ವಿತಿಯ ಬಿಕಾಂ ನೂತನ ಚಾಯ್ಸ್ ಬೆಸ್ಡ್ ಕ್ರೆಡಿಟ್ ಸಿಸ್ಟಂ( ಪಠ್ಯಕ್ರಮಕ್ಕೆ ಅನುಗುಣವಾಗಿ ರಸಲ್ಪಟ್ಟಿದ್ದು ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
Be the first to comment on "ದ್ವಿತೀಯ ಬಿಕಾಂನ ಪಠ್ಯಪುಸ್ತಕ ಆಧುನಿಕ ಬ್ಯಾಂಕ್ ನಿರ್ವಹಣೆ ಬಿಡುಗಡೆ"