ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಜಂಬು ಜಾತ್ರೆಗೆ ಹೆಸರುವಾಸಿಯಾಗಿರುವ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನದ ಗರ್ಭಗುಡಿ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಹಣ ಹಾಗೂ ಬೆಳ್ಳಿಯ ವಸ್ತುವನ್ನು ದೋಚಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ದೇವಾಲಯದ ಅರ್ಚಕರು ಬೆಳಗ್ಗೆ ದೇವಾಲಯಕ್ಕೆ ಬರುವ ಸಂದರ್ಭ ಗರ್ಭಗುಡಿಯ ಬಾಗಿಲುಗಳು ತೆರೆದೇ ಇದ್ದುದನ್ನು ಗಮನಿಸಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗರ್ಭಗುಡಿಯ ಹೊರಗೆ ಇದ್ದ ಕಾಣಿಗೆ ಹುಂಡಿಯನ್ನು ತುಂಡರಿಸಿದ್ದು, ಅದರಲ್ಲಿ ಹೆಚ್ಚಿನ ನಗದು ಇರಲಿಲ್ಲ ಎನ್ನಲಾಗಿದೆ. ಗರ್ಭ ಗುಡಿಯ ಒಳಗೆ ಇದ್ದ ಸುಮಾರು ಅರ್ಧ ಕೆಜಿ ಗೂ ಅಧಿಕ ತೂಕದ ಬೆಳ್ಳಿಯ ಸಾಮಾಗ್ರಿ ಹಾಗೂ ಎರಡು ಕಾಣಿಕೆ ಹುಂಡಿಯನ್ನು ತುಂಡರಿಸಿ ಸುಮಾರು ೭.೫ಸಾವಿರ ನಗದು ದೂಚಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ತಂಡ ಬೇಟಿ ನೀಡಿದ್ದು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ವಿಟ್ಲ ಸಮೀಪ ಕೇಪು ದೇವಸ್ಥಾನದಲ್ಲಿ ಕಳ್ಳತನ"