ಬಂಟ್ವಾಳ: ಭತ್ತ ಬೆಳೆಯುವ ಮೂಲಕ ಮೂಲ ಕೃಷಿಗೆ ಪ್ರಾಮುಖ್ಯತೆ ನೀಡುವ ಕೃಷಿ ಇಲಾಖೆಯ ಆತ್ಮ ಯೋಜನೆ ಅಡಿಯಲ್ಲಿ ರೈತರ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ ನಡಿಬೈಲು ಎಂಬಲ್ಲಿಯ ಭತ್ತದ ಕೃಷಿಕರಾದ ದಾಮೋದರ ಶೆಣೈ ಮನೆಯಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಮ್ಯಾನೇಜರ್ ಸಂದೇಶ್ ಭತ್ತ ಕೃಷಿ ಕುರಿತ ಅನಿವಾರ್ಯತೆ ಮಾಹಿತಿ ನೀಡಿದರು.ಕೃಷಿ ಇಲಾಖೆಯ ಅಧಿಕಾರಿ ನಾರಾಯಣ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಕೃಷಿಕರಾದ ದಾಮೋದರ ಶೆಣೈ, ನಾರಾಯಣ ನಾಯಕ್, ಮೋನಪ್ಪ ಪೂಜಾರಿ, ವಸಂತ ಪ್ರಭು, ರಮೇಶ್ ಶೆಣೈ, ನಾರಾಯಣ ಭಟ್, ವಸಂತಿ ನಾಯಕ್, ಗುಣಪಾಲ ಶೆಟ್ಟಿ, ಬಾಲಕೃಷ್ಣ ಪ್ರಭು, ಹರ್ಷಿತ್ ಜೈನ್, ಸದಾಶಿವ ಪ್ರಭು. ಸಂತೋಷ ಶೆಣೈ ಮತ್ತಿತರರು ಭಾಗವಹಿಸಿದ್ದರು.
Be the first to comment on "ಕರ್ಪೆ ನಡಿಬೈಲಿನಲ್ಲಿ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ"