ಬಂಟ್ವಾಳ: ಮೇಲ್ಕಾರ್ ಮತ್ತು ಕಲ್ಲಡ್ಕ ಜಂಕ್ಷನ್ ಗಳಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ವತಿಯಿಂದ ಪ್ರತ್ಯೇಕವಾಗಿ ಪ್ರತಿಭಟನೆಯು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ನಡೆಯಿತು. ಈ ವೇಳೆ ಜನಪ್ರತಿನಿಧಿಗಳ ಮುಖವಾಡ ಧರಿಸಿ ಅಣಕುಪ್ರದರ್ಶನವನ್ನೂ ಮಾಡಲಾಯಿತು.
ಕಲ್ಲಡ್ಕದಲ್ಲಿ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಮುಂದಿನ ಹತ್ತು ದಿನಗಳೊಳಗಾಗಿ ಹೆದ್ದಾರಿ ಗುಂಡಿಗಳನ್ನು ಮುಚ್ಚದೇ ಇದ್ದಲ್ಲಿ ಮುಂದೆ ಹೆದ್ದಾರಿಯನ್ನು ತಡೆಯುವ ಮೂಲಕ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ರಿಯಾಝ್ ಕಡಂಬು, ಕಲಂದರ್ ಪರ್ತಿಪ್ಪಾಡಿ, ಝಕರಿಯಾ ಗೋಳ್ತಮಜಲು, ಫೈಝಲ್ ಮಂಚಿ, ಸತ್ತಾರ್ ಕಲ್ಲಡ್ಕ, ಸಿದ್ದೀಖ್ ಪನಾಮಾ, ಯೂಸುಫ್ ಹೈದರ್, ಜವಾಝ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಶಾಕೀರ್ ಅಳಿಕೆಮಜಲು ಸ್ವಾಗತಿಸಿ, ವಂದಿಸಿದರು. ಮೇಲ್ಕಾರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ರಾಜ್ಯ ಅಧ್ಯಕ್ಷರಾದ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತನಾಡಿ, ಸರಕಾರ ಜನರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡದೆ ಜನರ ಹಕ್ಕನ್ನು ಹತ್ತಿಕುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್ ಎಚ್, ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕ, ಪ್ರಮುಖರಾದ ಸಲೀಂ ಕುಂಪನಮಜಲ್, ಮುನೀಶ್ ಅಲಿ, ಇದ್ರೀಸ್ ಪಿ ಜೆ, ಸಲೀಂ ಅಲಾಡಿ ಉಪಸ್ಥಿತರಿದ್ದರು. ಮಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಹೆದ್ದಾರಿ ಅವ್ಯವಸ್ಥೆ ಖಂಡಿಸಿ ಕಲ್ಲಡ್ಕ, ಮೇಲ್ಕಾರಿನಲ್ಲಿ ಎಸ್.ಡಿ.ಪಿ.ಐ. ಪ್ರತಿಭಟನೆ"